ಬೆಂಗಳೂರು: ಗುರುವಾರ ಮುಂಜಾನೆ ಸಿಲಿಕಾನ್ ಸಿಟಿ ಹಾಗೂ ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿ ನಂದಿಬೆಟ್ಟ, ಊಟಿ ಹಾಗೂ ಕಾಶ್ಮೀರದಂತಹ ವಾತಾವರಣ ಕಂಡು ಬಂದಿದೆ.

ಬೆಳ್ಳಂಬೆಳಿಗ್ಗೆ ನಗರದಲ್ಲಿ ಕಂಡು ಬಂದ ಮಂಜಿನ ವಾತಾವರಣ ಕಂಡು ನಗರದ ಜನತೆ ಫಿದಾ ಆಗಿದ್ದಾರೆ. ನಗರದ ಗಗನಚುಂಬಿ ಕಟ್ಟಡಗಳು ಹಾಗೂ ಬಹುತೇಕ ರಸ್ತೆಗಳು ದಟ್ಟ ಮಂಜಿನಿಂದ ಆವರಿಸಿದ ದೃಷ್ಯ ಕಂಡು ಕಚೇರಿ ಹಾಗೂ ಕೆಲಸಕ್ಕೆ ಹೋಗುವವರು ಫೋಟೋ, ವಿಡಿಯೋ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.
ದಟ್ಟ ಮಂಜಿನಿಂದಾಗಿ ನಗರದ ರಸ್ತೆಗಳು ಕಾಣದ ಸ್ಥಿತಿ ಕಂಡು ಬಂದಿತ್ತು. ಮಧ್ಯಾಹ್ನದವರೆಗೂ ಸಿಲಿಕಾನ್ ಸಿಟಿ ಬೆಂಗಳೂರು ಊಟಿ-ಶಿಮ್ಲಾ-ಮನಾಲಿಯಂತೆ ಕಂಡು ಬಂದಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ 30 ವರ್ಷಗಳ ಬಳಿಕ ಮೊದಲ ಬಾರಿಗೆ ನಗರದಲ್ಲಿ ಶೀತಗಾಳಿಯ ಪರಿಣಾಮ ಮಂಜಿನ ವಾತಾವರಣ ಮನೆ ಮಾಡಿತ್ತು.
ಮುಂದಿನ ಮೂರು ದಿನ ಅಲಬೇಲಾ ಮೌಸಂ(ಮೋಡ ಕವಿದ ವಾತಾವರಣ) ಬೆಂಗಳೂರಿನಲ್ಲಿ ಇರಲಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








