ಕೊಪ್ಪಳ: ವಿವಿಧ ರಾಜ್ಯಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ನಯಾಪೈಸೆ ಖರ್ಚು ಮಾಡದೆ ಗೆದ್ದು ಬಂದಿದ್ದಾರೆ ಸಿವಿಲ್ ಇಂಜಿನಿಯರಿಂಗ್ ಪದವೀಧರ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಾಲಗಿತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪಟ್ಟಲಚಿಂತಿ ಗ್ರಾಮದಿಂದ ನೂತನ ಸದಸ್ಯರಾಗಿ ರಾಘವೇಂದ್ರ ರಾಜೂರು ಆಯ್ಕೆಗೊಂಡಿದ್ದಾರೆ.
BE, Btech, Mtech ಪದವಿ ಪಡೆದಿರುವ ರಾಘವೇಂದ್ರ ರಾಜೂರು, ಮಹಾರಾಷ್ಟ್ರದ ಪುಣೆಯಲ್ಲಿ 2 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಪೈಸೆಯನ್ನೂ ಖರ್ಚು ಮಾಡದೆ ಗೆದ್ದಿರುವ ರಾಘವೇಂದ್ರ, ಕುಷ್ಟಗಿ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಏಕೈಕ ಇಂಜಿನಿಯರಿಂಗ್ ಪದವೀಧರರ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೂತನ ಸದಸ್ಯ ರಾಘವೇಂದ್ರ, ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರಲಿಲ್ಲ. ಊರಿನ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಹಿರಿಯರು, ಯುವಕರು ಸ್ಪರ್ಧೆ ಮಾಡುವಂತೆ ಸಲಹೆ ನೀಡಿದರು. ಅವರ ಮಾತಿಗೂ ಕೂಡ ಮನಸ್ಸು ಒಪ್ಪಲಿಲ್ಲ. ಹಿರಿಯರು ಯುವಕರು ನೀನು ಒಬ್ಬ ವಿದ್ಯಾವಂತ ಆಗಿರೋದ್ರಿಂದ ಊರು ಅಭಿವೃದ್ಧಿ ಆಗುತ್ತೆ. ನೀನೇ ಸ್ಪರ್ಧೆ ಮಾಡುವಂತೆ ಬಿಗಿಪಟ್ಟು ಹಿಡಿದರು. ಎಲ್ಲರ ಒತ್ತಾಯದಂತೆ ಕೊನೆಗೂ ಚುನಾವಣೆಯ ಅಖಾಡಕ್ಕೆ ಧುಮುಕಿದೆ. ಚುನಾವಣೆಯಲ್ಲಿ ನಾನಾ ರೀತಿಯ ಆಮಿಷ ತೋರ್ಸೋದು ಸಹಜ, ಎಲ್ಲರೂ ಕೂಡ ನನ್ನಿಂದ ಏನನ್ನು ನಿರೀಕ್ಷೆ ಮಾಡದೆ ಪ್ರಾಮಾಣಿಕವಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ಕೃತಜ್ಞತೆ. ನನ್ನ ಮೇಲೆ ನಂಬಿಕೆಯಿಟ್ಟು ಗೆಲ್ಲಿಸಿದ ಎಲ್ಲ ಸಾರ್ವಜನಿಕರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತೇನೆ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel