ಕೊಪ್ಪಳ/ವಿಜಯಪುರ: ಗ್ರಾಮ ಪಂಚಾಯಿತಿಗಳಿಗೆ ನಡೆಯುತ್ತಿರುವ ಎರಡನೇ ಹಂತದ ಮತದಾನದ ವೇಳೆ ಮತಗಟ್ಟೆ ಏಜೆಂಟ್-ಏಜೆಂಟ್ ಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗಲಡೋಣಿ ಗ್ರಾಮದಲ್ಲಿ ನಡೆದಿದೆ.

ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಮತತಗಟ್ಟೆ ಏಜೆಂಟರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಸ್ಥಳದಲ್ಲಿದ್ದ ಪೆÇಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ಶಾಂತವಾಗಿದ್ದು, ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಮತ್ತೊಂದೆಡೆ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಸೂಸುತ್ರವಾಗಿ ಮುಗಿದು ಹೋಗಿದೆ. ಆದ್ರೇ, ಎರಡನೇ ಹಂತದ ಚುನಾವಣೆಯಲ್ಲಿ ಭೀಮಾತೀರ ವಿಜಯಪುರದಲ್ಲಿ ಮತಗಟ್ಟೆಯ ಅಧಿಕಾರಿ ಹಾಗೂ ಮತದಾರ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮ ಪಂಚಾಯತಿಯ 5ನೇ ವಾರ್ಡ್ ನ ಮತಗಟ್ಟೆ ಸಂಖ್ಯೆ 102ರಲ್ಲಿ ಓಟ್ ಹಾಕಲು ಬಂದಿದ್ದ ವೇಳೆ ಮತದಾರನಿಗೆ ಮತಗಟ್ಟೆ ಅಧಿಕಾರಿ ಏಕ ವಚನದಲ್ಲಿ ಮಾತನಾಡಿದ್ದಾನೆ ಎಂಬ ವಿಚಾರಕ್ಕೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಕೆಲಕಾಲ ಮತಗಟ್ಟೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಬಳಿಕ ಮತ್ತೆ ಮತದಾನ ಮುಂದುವರಿದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








