ಇಂದು ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿರುವ ಬೆನ್ನಲ್ಲೇ 10 ನೇ ತರಗತಿಯ ಸಿಬಿಎಸ್ ಇ ತರಗತಿ ಫಲಿತಾಂಶ ನಾಳೆ ಹೊರ ಬೀಳಲಿದೆ. ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ್ ಫೋಕರಿಯಲ್ ನಿಶಾಂಕ್ ಅವರು ಟ್ವೀಟ್ ಮಾಡುವ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಹೊರ ಬೀಳಲಿದ್ದು, ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದ್ದಾರೆ.
ಫಲಿತಾಂಶವನ್ನು cbse.nic.in / cbseresults.nic.in / results.nic.in ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಈ ಹಿಂದೆ ಕೊರೋನಾ ಬಿಕ್ಕಟ್ಟಿಗೂ ಮುನ್ನ ಶಾಲೆಗಳಲ್ಲಿ ನಡೆದಿದ್ದ ಪ್ರಾಕ್ಟಿಕಲ್ ಪರೀಕ್ಷೆಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕ ನೀಡಲು ಮಂಡಳಿ ನಿರ್ಧಾರಿಸಿದೆ.








