ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗ ಸ್ಥಗಿತಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
ಪುಣೆ, ಸೆಪ್ಟೆಂಬರ್11: ದೇಶದ ಅಸ್ಟ್ರಾಜೆನೆಕಾ ಆಕ್ಸ್ಫರ್ಡ್ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಸ್ಥಗಿತಗೊಳಿಸಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಗುರುವಾರ ಹೇಳಿದೆ.
ಈ ವಾರದ ಆರಂಭದಲ್ಲಿ, ಅಸ್ಟ್ರಾಜೆನೆಕಾ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ವಿವರಿಸಲಾಗದ ಅನಾರೋಗ್ಯ ಕಾಣಿಸಿಕೊಂಡ ಕಾರಣದಿಂದ ಪ್ರಯೋಗವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ
ಬುಧವಾರ, ಎಸ್ಐಐ ಪ್ರಯೋಗಗಳೊಂದಿಗೆ ಮುಂದುವರಿಯುತ್ತಿದೆ ಮತ್ತು ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ಹೇಳಿತ್ತು. ಈ ನಡುವೆ ಕೇಂದ್ರ ಔಷಧ ನಿಯಂತ್ರಕ ಡಿಸಿಜಿಐ ಇತರ ದೇಶಗಳಲ್ಲಿ ಆಕ್ಸ್ಫರ್ಡ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಮಾಹಿತಿ ನೀಡದ ಕಾರಣ ಎಸ್ಐಐಗೆ ಶೋ-ಕಾಸ್ ನೋಟಿಸ್ ನೀಡಿತ್ತು.
ನಂತರ, ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅಸ್ಟ್ರಾಜೆನೆಕಾ ಪ್ರಯೋಗಗಳನ್ನು ಪುನರಾರಂಭಿಸುವವರೆಗೆ ಭಾರತದ ಪ್ರಯೋಗಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಎಸ್ಐಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ದ ಸೂಚನೆಗಳನ್ನು ಪಾಲಿಸುತ್ತಿದೆ ಎಂದು ಹೇಳಿದೆ. ಡಿಸಿಜಿಐ, ರೋಗಿಯ ಸುರಕ್ಷತೆ ಖಾತ್ರಿಯಾಗುವವರೆಗೆ ದೇಶದಲ್ಲಿ ಲಸಿಕೆಯ ಹಂತ 2 ಮತ್ತು 3 ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ಏಕೆ ಎಂದು ಎಸ್ಸಿಐಗೆ ಶೋ-ಕಾಸ್ ನೋಟಿಸ್ನಲ್ಲಿ ತಿಳಿಸಿತ್ತು.








