ಉತ್ತರಾಖಂಡ : ಉತ್ತರಾಖಂಡದಲ್ಲಿ ಮತ್ತೊಮ್ಮೆ ಮೋಡಗಳು ಘರ್ಜಿಸುತ್ತಿದ್ದು, 2013 ರ ಕರಾಳ, ಪ್ರಳಯಾಂತಕ ಋತುಮಾನವನ್ನು ಜ್ಞಾಪಿಸುವಂತಿದೆ. ಇಲ್ಲಿನ ಪಿಥೋರಗರ್ ಜಿಲ್ಲೆಯ ಎರಡು ಹಳ್ಳಿಗಳಲ್ಲಿ ಇಂದು ಬೆಳಿಗ್ಗೆ ಮೇಘಸ್ಪೋಟವಾಗಿದ್ದು, ಭಾರಿ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ.
ಮುನ್ಸಿಯರಿಯ ಟಾಗಾ ಗ್ರಾಮ ಮತ್ತು ಪಿಥೋರಗರ್ ಜಿಲ್ಲೆಯ ಬಂಗಪಾನಿಯ ಗೆಲಾ ಗ್ರಾಮದಲ್ಲಿ ಭಾರಿ ವರ್ಷಧಾರೆ ಆಗಿದ್ದು, ಕನಿಷ್ಠ ಒಂಬತ್ತು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಮೇಘಸ್ಫೋಟದಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಸದ್ಯ ರಕ್ಷಣಾ ತಂಡಗಳು ಎರಡು ಗ್ರಾಮಗಳನ್ನು ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ನಾಪತ್ತೆಯಾದವರ ಹುಡುಕಾಟ ನಡೆಯುತ್ತಿದೆ.








