ಬೆಂಗಳೂರು: ಮಲಯಾಳಂ (Kerala) ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಲೈಂಗಿಕ ದೌರ್ಜನ್ಯ ಚರ್ಚೆ ಈಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದೆ. ಇಲ್ಲಿಯೂ ಈ ಕುರಿತು ಸಮಿತಿ ರಚಿಸಬೇಕೆಂದು ಸಿಎಂ ಬಳಿ ಮನವಿ ಮಾಡಲಾಗಿದೆ. ಇದಕ್ಕೆ ಸಿಎಂ ಸೂಕ್ತವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಕನ್ನಡ ಚಿತ್ರರಂಗದ ಫೈರ್ (FIRE) ಸಂಸ್ಥೆ ನೀಡಿರುವ ಮನವಿಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದ್ದಾರೆ. ಫೈರ್ ಸಂಸ್ಥೆಯ ಸದಸ್ಯರು ಕೇರಳ ಮಾದರಿಯಲ್ಲಿ ಸಮಿತಿ ಮಾಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಪರಿಶೀಲನೆ ನಡೆಸಿದ ನಂತರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ನಟ ಚೇತನ್, ಶೃತಿ ಹರಿಹರನ್ (Sruthi Hariharan) ನೇತೃತ್ವದ ಫೈರ್ ಸಂಸ್ಥೆ ಸಿಎಂ ಭೇಟಿ ಮಾಡಿ ಮನವಿ ಮಾಡಿತು.








