ಶಿವಮೊಗ್ಗ : ರಾಜರಾಜೇಶ್ವರಿ ಹಾಗೂ ಶಿರಾ ಉಪಚುನವಣೆಯಲ್ಲಿ ಗೆಲುವು ನಮ್ಮದೇ ಆಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರು ತಿಂಗಳ ಬಳಿಕ ಶಿಕಾರಿಪುರಕ್ಕೆ ಭೇಟಿ ನೀಡಿದ ಸಿಎಂ ಬಿಎಸ್ ವೈ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಉಪಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಉಪ ಚುನಾವಣೆಯಲ್ಲಿ ನೂರಕ್ಕೆ ನೂರು ಎರಡು ಕ್ಷೇತ್ರಗಳಲ್ಲಿ ತಾವೇ ಗೆಲುವವನ್ನು ಸಾಧಿಸಲಾಗುತ್ತದೆ.
ಇದನ್ನೂ ಓದಿ : ನಿಮ್ಮ ಬಳಿ ಬಂಡೆ ಇರ್ಬೊದು, ನಮ್ಮ ಬಳಿ ನಿಮ್ಮಿಂದ ಬಂದ ಡೈನಾಮೇಟ್ ಗಳಿವೆ : ಕಟೀಲ್
ಇದಕ್ಕಾಗಿ ಪರಿಶ್ರಮ ಮುಂದುವರೆಸಲಾಗಿದೆ. ಶಿರಾ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ವಿಜಯೇಂದ್ರ ಅವರೇ ಬೀಡು ಬಿಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆ ಮಾತನಾಡಿ, ನನ್ನ ಶಕ್ತಿ ಮೀರಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡುತ್ತೇವೆ.
ಮನೆ ಕಳೆದುಕೊಂಡವರಿಗೆ ಹೊಸ ಮನೆ ಕಟ್ಟಿಸಿಕೊಡಲಾಗುತ್ತದೆ. ಬೆಳೆ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಆರ್.ಆರ್.ನಗರ ಬೈ ಎಲೆಕ್ಷನ್ : ಕಮಲ ಹಿಡಿದ ಕಾಂಗ್ರೆಸ್ ಮುಖಂಡರು