ಕಾಮನ್ ಸೆನ್ಸ್ ಇರುವ ಸಿಎಂ ಬಂದರೆ ಸಾಕು : ಹೆಚ್.ವಿಶ್ವನಾಥ್
ಬೆಂಗಳೂರು : ಹೈಕಮಾಂಡ್ ಸೂಚಿಸಿದ್ರೆ ತಕ್ಷಣ ರಾಜೀನಾಮೆ ನೀಡೋದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
ಈ ಮಧ್ಯೆ ಸಿಎಂ ಬಿಎಸ್ ವೈ ಹೇಳಿಕೆ ಬಗ್ಗೆ ಎಂಎಲ್ ಸಿ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಹೇಳಿಕೆಯಲ್ಲಿ ಸ್ಪಷ್ಟತೆಯಿದೆ ಹೊರತು ಯಾವುದೇ ಗೊಂದಲವಿಲ್ಲ ಎಂದಿದ್ದಾರೆ. ಅಲ್ಲದೆ ಕಾಮನ್ ಸೆನ್ಸ್ ಇರುವ ಸಿಎಂ ಬಂದರೇ ಸಾಕು ಎನ್ನುವ ಮೂಲಕ ಸಿಎಂ ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಎಂ ಹೇಳಿಕೆಯಲ್ಲಿ ಸ್ಪಷ್ಟತೆಯಿದೆ ಹೊರತು ಯಾವುದೇ ಗೊಂದಲವಿಲ್ಲ. ಹೈಕಮಾಂಡ್ ಯಾವಾಗ ಸೂಚಿಸುತ್ತೆ ಆಗ ರಾಜೀನಾಮೆ ನೀಡುತ್ತೇನೆ.
ಅಲ್ಲಿಯವರೆಗೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರಲ್ಲಿ ಅನಗತ್ಯ ಗೊಂದಲ ಬೇಡ. ಆದರೆ ರಾಜ್ಯದಲ್ಲಿ ಪರ್ಯಾಯ ನಾಯಕರು ಬಹಳಷ್ಟು ಜನರಿದ್ದಾರೆ. ಮತ್ತೋರ್ವ ನಾಯಕರು ಬರುವುದಾದರೆ ವೀರಶೈವ ಸಮುದಾಯದವರೇ ಬರಲಿ ಎಂದರು.
ಇನ್ನು ವೀರಶೈವರಲ್ಲಿ ಪಂಚಮಸಾಲಿಗಳು ಬಹಳಷ್ಟಿದ್ದಾರೆ. ಮುರುಗೇಶ್ ನಿರಾಣಿ, ಯತ್ನಾಳ್ ಎಲ್ಲರೂ ಜವಾಬ್ದಾರಿ ನಿಭಾಯಿಸುವ ಸಾಮಥ್ರ್ಯವಿರುವವರು. ಯಡಿಯೂರಪ್ಪನವರಂತೆಯೇ ಸಮರ್ಥ ನಾಯಕರಾಗಬೇಕು. ಒಟ್ಟಾರೆ ಕಾಮನ್ ಸೆನ್ಸ್ ಇರುವ ಸಿಎಂ ಬಂದರೆ ಸಾಕು ಎಂದು ºವಿಶ್ವನಾಥ್ ಹೇಳಿದ್ದಾರೆ.









