Karnataka CM : ಮೇಕೆದಾಟು ವಿಚಾರವಾಗಿ ನಮ್ಮ ನಿಲುವು ಗಟ್ಟಿ : ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಜಲ ವಿವಾದ ಕುರಿತು ಸಭೆ ನಡೆಸಲಾಗಿದೆ.. ಸಭೆಯಲ್ಲಿ ಅಂತರಾಜ್ಯ ಜಲವಿವಾದಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ಬಗ್ಗೆ ಸಭೆ ಬಳಿಕ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು , ಸುಪ್ರೀಂಕೋರ್ಟ್ ನಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ವಿಚಾರಣೆಗೆ ನ್ಯಾಯಾಧೀಶರ ನೇಮಕ ಮಾಡಬೇಕು
ಇಲ್ಲದಿದ್ದರೆ ಓಪನ್ ಕೋರ್ಟ್ ನಲ್ಲಿ ಮೆನ್ಸನ್ ಮಾಡಲು ನಿರ್ಧಾರ ಮಾಡಲಾಗಿದೆ. ಮೇಕೆದಾಟು ವಿಚಾರವಾಗಿ ನಮ್ಮ ನಿಲುವು ಗಟ್ಟಿ ಮಾಡಿಕೊಂಡಿದ್ದೇವೆ. ತಮಿಳುನಾಡಿನ ಗುಂಡಾರು ವೈಗಾರ್ ಯೋಜನೆಗೆ ವಿರೋಧವಿದೆ.
ಹೈಡ್ರೋ ಪರರ್ ಯೋಜನೆಗೂ ವಿರೋಧ ಮಾಡಲು ನಿರ್ಧರಿಸಿದ್ದೇವೆ. ಕಾವೇರಿ ನಿಯಂತ್ರಣ ಪ್ರಾಧಿಕಾರದಲ್ಲಿ ಮೇಕೆದಾಟು ಯೋಜನೆ ಚರ್ಚೆಯಾಗಬೇಕು. ಮುಂದೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿದ್ದೇವೆ ಎಂದಿದ್ದಾರೆ..