ಸಿಎಂ ಮಹತ್ವದ ಸಭೆ : ಬೀಗವೋ…? ಬಿಡುಗಡೆಯೋ..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಧಿಸಲಾಗಿರುವ ವೀಕೆಂಡ್ ಕರ್ಫ್ಯೂ ಮತ್ತು ಹಾಫ್ ಲಾಕ್ ಡೌನ್ ಅನ್ನು ಮುಂದುವರೆಸಬೇಕೋ ಅಥವಾ ಮುಂದುವರೆಸಬಾರದೋ ಎಂಬುದು ಇಂದು ನಿರ್ಧಾರವಾಗಲಿದೆ.
ಕೋವಿಡ್ ಕಠಿಣ ಮಾರ್ಗಸೂಚಿ ಪರಿಷ್ಕರಣೆ ಮಾಡುವ ಕುರಿತು ಇಂದು ಮಧ್ನಾಹ್ನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಸದ್ಯ ಜಾರಿಯಲ್ಲಿರುವ ನಿಯಮಗಳ ಸಾಧಕ – ಬಾಧಕಗಳನ್ನು ಎಲ್ಲ ಆಯಾಮಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಈ ಸಭೆಯ ಬಗ್ಗೆ ಮುಖ್ಯಮಂತ್ರಿ ಬವಸರಾಜ್ ಬೊಮ್ಮಾಯಿ ಮಾತನಾಡಿದ್ದು, ವಾರಾಂತ್ಯದ ಕರ್ಫ್ಯೂ, ಶೇ.50 ರ ನಿಯಮಕ್ಕೆ ವಿನಾಯಿತಿ ನೀಡುವುದು ಸೇರಿ ಮಾರ್ಗಸೂಚಿ ಸಡಿಲಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ.
ಈವರೆಗೆ ನಾವು ಕೈಗೊಂಡಿರುವ ಕ್ರಮಗಳಿಂದ ಆಗಿರುವ ಪರಿಣಾಮ, ಈಗ ವಿನಾಯಿತಿ ನೀಡಲು ಏನೆಲ್ಲ ಮಾಡಬಹುದು, ಒಂದು ವೇಳೆ ವಿನಾಯಿತಿ ನೀಡುವ ಕೆಲಸ ಮಾಡಿದರೆ ಏನೆಲ್ಲಾ ಆಗಲಿದೆ? ಎನ್ನುವುದನ್ನೆಲ್ಲಾ ವೈಜ್ಞಾನಿಕವಾಗಿ ನೋಡಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.









