ಬೆಳಗಾವಿ : ಬಜೆಟ್ ಪ್ರಕ್ರಿಯೆ ಪ್ರಾರಂಭವಾಗಿದೆ. ಹಲವಾರು ಇಲಾಖೆಗಳ ಸಭೆ ನಡೆಸಿದ್ದೇನೆ. ಸೋಮವಾರ ಮತ್ತು ಮಂಗಳವಾರದ ಸೆಷನ್ ಬಳಿಕ ಮತ್ತೆ ಸಭೆ ನಡೆಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ..
ಬೆಳಗಾವಿಯಲ್ಲಿ ಮಾತನಾಡಿದ ಅವರು , ಫೆ 25 ರ ಬಳಿಕ ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯನ್ನು ಗಮನಿಸಿ ಮುಂದಿನ ಬಜೆಟ್ ಮಾಡ್ತೀವಿ. ನಮ್ಮ ಆರ್ಥಿಕ ಸ್ಥಿತಿ ಹಾಗೂ ಎಸ್ಒಎಸ್ ಮೊಬಲೈಜೆಷನ್ ಹೆಚ್ಚು ಮಾಡಲು ಆದೇಶಿಸಿದ್ದೇನೆ. ಎಲ್ಲವನ್ನೂ ರಿವೀವ್ ಮಾಡಿ ಬಜೆಟ್ ಮಂಡಿಸುತ್ತೇನೆ ಎಂದಿದ್ದಾರೆ…
ಅಲ್ಲದೇ ಉತ್ತರ ಕರ್ನಾಟಕಕ್ಕೆ ವಿಶೇಷ ಅನುದಾನ ವಿಚಾರವಾಗಿ ಮಾತನಾಡಿದ ಅವರು ಬಜೆಟ್ ನಲ್ಲಿ ಏನು ಆಗುತ್ತದೆ ಎಂದು ನಾನು ಇವತ್ತು ಹೇಳಲು ಸಾಧ್ಯವಿಲ್ಲ, ಅದು ಸರಿಯಲ್ಲ ಎಂದಿದ್ದಾರೆ…








