ಇಬ್ರಾಹಿಂ ಡೈವೋರ್ಸ್ ಮಾಡಿಸೋದ್ರಲ್ಲಿ ಎಕ್ಸ್ ಪರ್ಟ್
ವಿಜಯಪುರ : ಪಿಎಫ್ ಐ ಬ್ಯಾನ್ ಅನ್ನೋದು ಐದು ವರ್ಷದ ಡೈವರ್ಸ್ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ “ಇಬ್ರಾಹಿಂ ಡೈವೋರ್ಸ್ ಮಾಡಿಸೋದ್ರಲ್ಲಿ ಎಕ್ಸ್ ಪರ್ಟ್” ಎಂದು ಟಾಂಗ್ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಬ್ರಾಹಿಂ ಬರೀ ಮದುವೆ ಮಾಡೋದು, ಡೈವೋರ್ಸ್ ಮಾಡಿಸೋದ್ರಲ್ಲೆ ಎಕ್ಸ್ ಪರ್ಟ್. ಇದು ಗಂಭೀರ ವಿಚಾರ ಎಂದರು.

ಈ ಐದು ವರ್ಷ ಗಮನಿಸಿ ಕೇಂದ್ರ ಕ್ರಮ ಜರುಗಿಸಲಿದೆ. ಕಾಂಗ್ರೆಸ್ ತಮ್ಮ ಶಾಸಕನ ಮೇಲೆ ಕೊಲೆಗೆ ಯತ್ನಿಸಿದ ಸಂಘಟನೆಯ ಕೇಸ್ ಗಳನ್ನೆ ವಾಪಾಸ್ ತೆಗೆದುಕೊಂಡಿದೆ.
ಇದಕ್ಕಿಂತ ಹೆಚ್ಚಿನ ತುಷ್ಟಿಕರಣ ರಾಜಕಾರಣ ಬೇರೆ ಇಲ್ಲ. ತುಷ್ಟಿಕರಣ ರಾಜಕಾರಣದಿಂದ PFI, KFD ಹುಟ್ಟಿಕೊಂಡಿವೆ.
ಇಂಥ ಸಂಘಟನೆಗಳ ಧಮನ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.








