ಚಂಪಾ ಅವರ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ
ಬೆಂಗಳೂರು: ಇಂದು ಬೆಳಿಗ್ಗೆ ನಿಧನರಾದ ಸಾಹಿತಿ ಚಂದ್ರಶೇಖರ ಪಾಟೀಲ್ ಅವರ ಮೃತದೇಹವನ್ನು ಜ್ಯೋತಿ ಲೇಔಟ್ ನಿವಾಸಕ್ಕೆ ತರಲಾಗಿದ್ದು, ಸಿಎಂ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ನಗರದ ಡಿಸಿ ಮಂಜುನಾಥ ಅಂತಿಮ ದರ್ಶನ ಪಡೆದರು.
ಅಂತ್ಯಸಂಸ್ಕಾರದ ಕುರಿತು ಸಿಎಂ ಬೊಮ್ಮಾಯಿ ಕುಟುಂಬಸ್ಥರೊಂದಿಗೆ ಚರ್ಚೆ ಮಾಡಿದ್ದು, ಚಾಮರಾಜಪೇಟೆಯ ರುಧ್ರಭೂಮಿಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೀರಸಲಾಗುವುದು ಎಂದು ಹೇಳಿದರು.