ಹೆಚ್.ಡಿ.ದೇವೇಗೌಡರನ್ನು ಭೇಟಿಯಾದ ಸಿಎಂ ಬೊಮ್ಮಾಯಿ
ಬೆಂಗಳೂರು : ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿದ್ದರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ ಸಿಎಂ ಬೊಮ್ಮಾಯಿ, ಮಾಜಿ ಪ್ರಧಾನಿ ಕಾಲಿಗೆ ನಮಸ್ಕರಿಸಿ ಆಶಿರ್ವಾದ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾನತಾಡಿದ ಬೊಮ್ಮಾಯಿ, ಇಂದು ದೇವೇಗೌಡರನ್ನು ಭೇಟಿ ಮಾಡಿ ಆಶಿರ್ವಾದ ತೆಗೆದುಕೊಂಡೆ. ಈ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ, ಇರುವ ಸಮಸ್ಯೆ ಬಗೆಹರಿಸಿ. ರಾಜ್ಯದ ಸಮಸ್ಯೆ ಬಂದಾಗ ನನ್ನ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಅವರು ರಾಜ್ಯ ಎಂಬ ವಿಚಾರ ಬಂದಾಗ ಯಾವಾಗಲು ಇದ್ದಾರೆ ಈಗಲೂ ಇರುತ್ತಾರೆ. ರಾಜ್ಯದ ವಿಚಾರ ನೆಲ ಜಲ ವಿಚಾರಗಳ ಬಗ್ಗೆಯೂ ಮಾತನಾಡಿದ್ದೇನೆ. ನೀರಾವರಿ ವಿಚಾರವಾಗಿ ಹೆಚ್ ಡಿಕೆ ಪ್ರತಿಭಟನೆ ಎಲ್ಲವೂ ಗೊತ್ತಿದೆ. ನೆಲ ಜಲ ವಿಚಾರ ಬಂದಾಗ ನಾವೆಲ್ಲಾ ಒಂದೆ ಎಂದರು.
ಇನ್ನು ನಮ್ಮ ತಂದೆ ಜೊತೆಗೆ ದೇವೇಗೌಡರು ಆತ್ಮೀಯವಾಗಿದ್ದವರು. ಅವರು ಒಟ್ಟಿಗೆ ರಾಜಕಾರಣದಲ್ಲಿ ಇದ್ದವರು. ಹಿಂದಿನ ನೆನಪು ಮೆಲಕು ಹಾಕಿದ್ರು. ದೇವೇಗೌಡರು ರಾಜ್ಯದ ಹಿತಕ್ಕಾಗಿ ಶ್ರಮಿಸಿ ಎಂದಿದ್ದಾರೆ. ಯಾವುದೇ ವಿಚಾರವಾದ್ರು ರಾಜ್ಯದ ವಿಷಯಕ್ಕೆ ಸಹಕಾರ ಇರುತ್ತೆ ಎಂದಿದ್ದಾರೆ. ಈ ವಯಸ್ಸಲ್ಲಿ ರಾಜ್ಯಕ್ಕೆ ಒಳ್ಳೆದಾಗ್ಲಿ ಅನ್ನೋದನ್ನ ಮಾತ್ರ ಬಯಸುತ್ತಿದ್ದಾರೆ. ನೆಲ,ಜಲ ವಿಚಾರವಾಗಿ ಸೇರಿದಂತೆ ಒಟ್ಟಾರೆ ಚರ್ಚೆ ಮಾಡಿದ್ದೇವೆ. ಭೇಟಿ ಬಹಳ ಸಂತೋಷ ತಂದಿದೆ ಎಂದು ಬೊಮ್ಮಾಯಿ ಹೇಳಿದರು.









