ಬೆಂಗಳೂರು : ಸಿಎಂ ಬಿ.ಎಸ್ ಯಡಿಯೂರಪ್ಪ ನಾಲಿಗೆ ಮೇಲೆ ನಡೆಯೋ ನಾಯಕ. ನನಗೆ ಅವಕಾಶ ಕೊಟ್ಟೇ ಕೊಡ್ತಾರೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಸದಾಶಿವನಗರದಲ್ಲಿ ನಿರ್ಮಿಸಿರುವ ನೂತನ ನಿವಾಸದ ಗೃಹ ಪ್ರವೇಶ ಸಮಾರಂಭದಲ್ಲಿ ಹೆಚ್. ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಪರಿಷತ್ ಟಿಕೆಟ್ ವಿಚಾರವಾಗಿ ಮಾತನಾಡಿದ ಹಳ್ಳಿಹಕ್ಕಿ, ಮೇಲ್ಮನೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ನಾಲಿಗೆ ಮೇಲೆ ನಡೆಯೋ ನಾಯಕ ಯಡಿಯೂರಪ್ಪ, ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಅವಕಾಶ ಮಾಡಿಕೊಡ್ತಾರೆ ಎಂಬ ನಂಬಿಕೆ ಇದೆ. ಮುಂದೆ ಪರಿಷತ್ ಗೆ ನಾಮಕರಣ ಮಾಡುವ ವೇಳೆ ಗುರುತಿಸುತ್ತಾರೆ ಎಂದರು.
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಎಲ್ಲೂ ಅವಕಾಶ ಕೊಡಬೇಡಿ ಅಂತ ಹೇಳಿಲ್ಲ. ನೀವು ಜನರ ಮುಂದೆ ನಿಂತು ಬನ್ನಿ ಎಂದಿದೆ. ನಾವು ಜನರ ಎದುರು ನಿಂತು ಸೋತು ಬಂದಿದ್ದೇವೆ. ಸುಪ್ರೀಂ ತೀರ್ಪು ನಮಗೆ ಅಡ್ಡ ಬರುವುದಿಲ್ಲ. ನಮಗೆ ಖಂಡಿತ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.