ರಾಮಯ್ಯ ಆಸ್ಪತ್ರೆಗೆ ಸಿಎಂ ಭೇಟಿ : ಆಡಳಿತ ಮಂಡಳಿಗೆ ಕ್ಲಾಸ್
ಬೆಂಗಳೂರು : 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ದಿಢೀರ್ ಅಂತಾ ನಗರದ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ವೇಳೆ ಬೆಡ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಖುದ್ದು ಪರಿಶೀಲನೆ ನಡೆಸಿದರು. ಅಲ್ಲಿ ಬೆಡ್ ವಿತರಣೆ ವಿಚಾರವಾಗಿ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ ಸಿಎಂ, ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆ ಮಂಡಳಿ ಜೊತೆ ಸುದಿರ್ಘವಾಗಿ ಚರ್ಚೆ ಮಾಡಿದ್ದೇವೆ. ನಾವು ಏನು ಕೇಳ್ತೇವೆ ಅದೆಲ್ಲಾಕೊಡ್ತೇವೆ ಅಂತ ಹೇಳಿದ್ದಾರೆ.
ಒಟ್ಟು 800 ಬೆಡ್ ಗಳನ್ನ ಕೊಡ್ತೇವೆ ಅಂತ ಹೇಳಿದ್ದಾರೆ. ನಾಲ್ಕು ಗಂಟೆಗೆ ಸಭೆಗೆ ಕೂಡ ಅವರ ಬರ್ತಾರೆ. ಜನರ ಪ್ರಾಣ ಉಳಿಸೋಕೆ ಏನ್ ಬೇಕಾದ್ರೂ ಮಾಡ್ತೇವೆ ಅಂತ ರಾಮಯ್ಯ ಚೇರ್ ಮ್ಯಾನ್ ಜಯರಾಂ ಹೇಳಿದ್ದಾರೆ.
ರಾಮಯ್ಯ ಆಸ್ಪತ್ರೆಯ ಜಯರಾಮ್, ಶ್ರೀನಿವಾಸ್ ಮೂರ್ತಿ ಜೊತೆ ಮಾತನಾಡಿದ್ದೇವೆ. ನಾವು ಕೇಳಿರೋದನ್ನ ಎಲ್ಲವನ್ನೂ ನೀಡಲು ಒಪ್ಪಿದ್ದಾರೆ.
ಐಸಿಯು ವ್ಯವಸ್ಥೆ ಇರೋ 450 ಬೆಡ್, 450ಇತರೆ ಬೆಡ್ ಇವೆ. ಹೆಚ್ಚುವರಿಯಾಗಿ 200-300ಬೆಡ್ ವ್ಯವಸ್ಥೆ ಮಾಡಲಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.










