ಉಪಚುನಾವಣೆ ನಂತ್ರ ತೈಲ ಬೆಲೆ ಇಳಿಕೆ : ಬೊಮ್ಮಾಯಿ
ಹುಬ್ಬಳ್ಳಿ : ದೇಶದಲ್ಲಿ ಪ್ರತಿ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅದೆನಂದರೇ ಉಪಚುನಾವಣೆ ಬಳಿಕ ತೈಲ ಬೆಲೆ ಇಳಿಕೆ ಮಾಡುವ ಬಗ್ಗೆ ಸಿಎಂ ತಿಳಿಸಿದ್ದಾರೆ.
ಹೌದು..! ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹಾನಗಲ್ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.
ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ.
ತೈಲ ಬೆಲೆ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕ ಸುಧಾರಣೆಯಾದರೆ ತೈಲ ಬೆಲೆ ಇಳಿಕೆಯಾಗುತ್ತದೆ.
ಉಪಚುನಾವಣೆ ನಂತ್ರ ತೈಲ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದಿದ್ದಾರೆ.
ಇದೇ ವೇಳೆ ಹಾನಗಲ್ ಅಳಿಯ ಏನು ಕೊಟ್ಟಿದ್ದಾರೆಂಬ ಸಿದ್ದರಾಮಯ್ಯ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ನಾನು ಏನು ಕೊಟ್ಟಿದ್ದೇನೆಂದು ಜನರೇ ಹೇಳುತ್ತಾರೆ.
ಸಿದ್ದರಾಮಯ್ಯ 2,400 ಕೋಟಿ ಕೊಟ್ಟಿದ್ದಾಗಿ ಹೇಳಿದ್ದಾರೆ. ಯಾವಾಗ ಕೊಟ್ಟಿದ್ದಾರೆ, ಎಲ್ಲಿದೆ 2,400 ಕೋಟಿ ಎಂದು ಪ್ರಶ್ನಿಸಿದರು.
ಇನ್ನು ಹಾನಗಲ್‍ನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.
ಬಿಜೆಪಿ ಅಂದ್ರೆನೆ ಅಭಿವೃದ್ಧಿ. ಬಿಜೆಪಿ ಸರಕಾರದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ.
ಕ್ಷೇತ್ರದ ಜನರಿಗೆ ಯಾರ ಕಾಲದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುದು ಗೊತ್ತಿದೆ.
ಮತದಾರರು ಖಂಡಿತವಾಗಿ ಬಿಜೆಪಿ ಅಭ್ಯರ್ಥಿ ಸಜ್ಜನರನ್ನ ಗೆಲ್ಲಿಸುತ್ತಾರೆ.
ಕಾಂಗ್ರೆಸ್ ನವರು ಸುಳ್ಳುಗಳನ್ನ ಹೇಳಿಕೊಂಡು ಹೊರಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.









