ಬಿಜೆಪಿಯವರು ಮಂಚ ನೋಡಿ ಕೆಲಸ ಮಾಡ್ತಾರೆ : ಸಿ.ಎಂ.ಇಬ್ರಾಹಿಂ cm-ibrahim saaksha tv
ಬೆಳಗಾವಿ : ಬಿಜೆಪಿಯವರು ಮಂಚ ನೋಡಿ ಕೆಲಸ ಮಾಡ್ತಾರೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಕಿಡಿಕಾರಿದ್ದಾರೆ.
ಮೇಲ್ಮನೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸುವ ಬಗ್ಗೆ ಮಾತನಾಡಿದ ಇಬ್ರಾಹಿಂ, ಹೇಳೋಕೆ ಆಗಲ್ಲ, ಅವರು ಜನ ಕಡಿಮೆ ಇದ್ರೆ ಪಾಸ್ ಮಾಡ್ತಿಸ್ತಾರೆ.
ಬಿಜೆಪಿಯವರು ಮಂಚ ನೋಡಿ ಕೆಲಸ ಮಾಡುವವರು. ಮೇಲ್ಮನೆಯಲ್ಲಿ ಜನರಿದ್ದರೆ ಮಂಡಿಸಲ್ಲ, ಜನ ಇಲ್ಲ ಅಂದರೆ ಮಂಡಿಸ್ತಾರೆ.
ಬಿಜೆಪಿ ಅವರು ಮಂಚ ಖಾಲಿ ಇದ್ದರೆ ಮಾತ್ರ ಮಂಡಿಸ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು.
ಇನ್ನು ಸಿದ್ದರಾಮಯ್ಯಗೆ ಮುಜುಗರ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಮುಜುಗರ ಇಲ್ಲ. ಸಿದ್ದರಾಮಯ್ಯ ಅವರು ಸಂಪುಟದ ಮುಂದೆ ಇಡಿ ಎಂದು ಹೇಳಿಲ್ಲ.
ಹೆರಿಗೆನೇ ಆಗಿಲ್ಲ ಅಂದರೆ ನಾಮಕರಣ ಎಲ್ಲಿಂದ?. ಅಧಿಕಾರಿಗಳು ಕಡತ ಮೂವ್ ಮಾಡಿದ್ದಾರೆ.
ಒಂದು ವೇಳೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದರೆ ಮುಜುಗರ ಆಗುತ್ತಿತ್ತು ಎಂದರು.









