ಮಂಗಳೂರಿನ ಅತಿಥಿ ಗೃಹದಲ್ಲಿ AICC ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿದ್ದು, ಇಬ್ಬರ ನಡುವೆ ನಡೆದ ಗುಪ್ತ ಮಾತುಕತೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ‘ಗುರು–ಗಾಂಧಿ ಸಂವಾದ’ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಕೆಲವು ನಿಮಿಷಗಳ ಕಾಲ ಗುಸು ಗುಸು ಮಾತುಕತೆ ನಡೆಸಿದರು.
ಈ ಮಾತುಕತೆಯ ಸ್ವರೂಪ ಬಹಿರಂಗವಾಗಿಲ್ಲದಿದ್ದರೂ, ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಸಚಿವ ಸಂಪುಟ ಬದಲಾವಣೆ, ಪಕ್ಷದ ಆಂತರಿಕ ಬೆಳವಣಿಗೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆ ಇರುವುದಾಗಿ ಪಕ್ಷದ ಮೂಲಗಳು ಸೂಚಿಸುತ್ತಿವೆ.
ಮುಖ್ಯಮಂತ್ರಿಯವರ ಈ ಆಕಸ್ಮಿಕ ಭೇಟಿ ಮತ್ತು ದೀರ್ಘ ಚರ್ಚೆ ಕಾಂಗ್ರೆಸ್ ನಾಯಕತ್ವದ ಮುಂದಿನ ತಂತ್ರಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.








