ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಹಿನ್ನೆಲೆ ಇಂದು ಒಂದು ಹೊತ್ತಿನ ಊಟ ತ್ಯಜಿಸಲಿರುವ ಸಿಎಂ ಬಿಎಸ್ ಯಡಿಯೂರಪ್ಪ. ಅಲ್ಲದೆ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೂ ಹೊತ್ತಿನ ಊಟ ತ್ಯಜಿಸುವ ಬಗ್ಗೆ ಸಂದೇಶ ನೀಡುತ್ತಾರೆ ಎನ್ನಲಾಗಿದೆ.
ಇಂದು ಬಿಜೆಪಿ ಪಕ್ಷದ ಸಂಸ್ಥಾಪನ ದಿನವಾಗಿದೆ. ಹಾಗಾಗಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕೆಲ ಸೂಚನೆಗಳನ್ನು ನೀಡಿದ್ದಾರೆ. ಪಕ್ಷದ ಸಂಸ್ಥಾಪನ ದಿನ ಆಚರಿಸುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕಾರ್ಯಕರ್ತ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿ. ಜೊತೆಗೆ ಲಾಕ್ ಡೌನ್ ಇದ್ದರೂ ಸಹ ತಮ್ಮ ಜೀವದ ಹಂಗು ತೊರೆದು ಕೊರೊನಾ ಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಗೌರವ ಸಮರ್ಪಣೆ ಮಾಡುವ ಸಂಕೇತವಾಗಿ ಒಪ್ಪತ್ತಿನ ಉಪವಾಸ ಮಾಡಿ ಎಂದು ನಡ್ಡಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪತ್ತಿನ ಉಪವಾಸ ಮಾಡಲಿದ್ದಾರೆ.








