ಕೋವ್ಯಾಕ್ಸಿನ್ ಪಡೆದ ಸಿಎಂ ಯಡಿಯೂರಪ್ಪ CM Yeddyurappa
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದರು. ಇಂದು ಮೊದಲ ಡೋಸ್ ಪಡೆದ ಬಿಎಸ್ ವೈ, ಯಾವುದೇ ಆತಂಕವಿಲ್ಲದೆ ಲಸಿಕೆ ಹಾಕಿಸಿಕೊಳ್ಳುವಂತೆ ರಾಜ್ಯದ ಜನತೆಗೆ ಕರೆ ನೀಡಿದರು.
ಕೋವ್ಯಾಕ್ಸಿನ್ ದೇಶೀಯ ಲಸಿಕೆಯಾಗಿದೆ. ಇದೇ ಲಸಿಕೆಯನ್ನು ನಾನು ತೆಗೆದುಕೊಂಡಿದ್ದೇನೆ. ಲಸಿಕೆಯಿಂದ ಯಾವುದೇ ಸಮಸ್ಯೆ ಇಲ್ಲ. ಜನತೆ ಲಸಿಕೆ ಹಾಕಿಸಿಕೊಳ್ಳಬೇಕು.
ಪ್ರಧಾನಿಗಳು ಅಲ್ಲದೇ ಅವರ ತಾಯಿ ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ. ಇಂದು ನಾನು ಹಾಕಿಸಿಕೊಂಡಿದ್ದೇನೆ.
ಹೀಗಾಗಿ ನಾನು ರಾಜ್ಯದ ಜನತೆಗೆ ಕರೆ ಕೊಡುತ್ತೇನೆ. ಕೊರೊನಾ ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಆಗೋದಿಲ್ಲ.
ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಲಸಿಕೆ ಪಡೆದ ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಕರೆ ಕೊಟ್ಟರು.