ಕೊರೊನಾ ಭೀತಿಯಿಂದ ರಾಜ್ಯ ಲಾಕ್ ಡೌನ್ ಆಗಿದೆ. ಆದರೂ ರಾಜ್ಯದ ಕೆಲವು ಕಡೆ ಜನ ಮನೆಯಿಂದ ಹೊರ ಬರುತ್ತಿದ್ದಾರೆ. ಇದರಿಂದ ಬೇಸರಗೊಂಡ ಸಿ.ಎಂ. ಯಡಿಯೂರಪ್ಪ ಸುಮ್ಮನೆ ರಸ್ತೆಯಲ್ಲಿ ತಿರುಗಿದ್ರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕರ್ಪ್ಯೂ ವಾತವರಣ ಇದೆ. ಆದರೂ ಜನ ಕಾರು, ಬೈಕ್ ಗಳಲ್ಲಿ ಓಡಾಡುತ್ತಿದ್ದಾರೆ. ಸುಮ್ಮನೆ ಮನೆಯಿಂದ ಹೊರ ಬಂದ್ರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸರು ಕ್ರಮ ತೆಗೆದುಕೊಂಡರೇ ಅದಕ್ಕೆ ನಾನು ಜವಬ್ದಾರಿ ಅಲ್ಲ. ಆ ಮೇಲೆ ನನ್ನನ್ನು ದೋಷಿಸಬೇಡಿ ಎಂದು ಸಿ.ಎಂ ಯಡಿಯೂರಪ್ಪ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದೆ ವೇಳೆ ಮಾತನಾಡಿದ ಅವರು, ನಾನು ಯುಗಾದಿ ಹಬ್ಬವನ್ನು ಮನೆಯಲ್ಲಿ ಆಚರಿಸುತ್ತೇನೆ. ನೀವು ಸಹ ಮನೆಯಲ್ಲೇ ಹಬ್ಬ ಆಚರಿಸಿ, ಮನೆಯಿಂದ ಹೊರ ಬರಬೇಡಿ,. ಮಾರ್ಕೆಂಟ್ ಗೆ ಹೋಗುವುದು ನಿಲ್ಲಿಸಿ. ಆಡಂಬರದ ಹಬ್ಬ ಆಚರಣೆ ಬೇಡ. ಮನೆಯಲ್ಲಿ ಸಿಂಪಲ್ ಆಗಿ ಆಚರಣೆ ಮಾಡಿ ಎಂದು ಸಾರ್ವಜನಿಕರಲ್ಲಿ ಯಡಿಯೂರಪ್ಪ ಮನವಿ ಮಾಡಿದ್ದಾರೆ








