ಅಗತ್ಯವಿದ್ದರೆ, ಆರು ವಾರಗಳಲ್ಲಿ ಹೊಸ ಸ್ವರೂಪದ ವೈರಸ್ ಗೂ ಲಸಿಕೆ – ಬಯೋಎನ್ಟೆಕ್ BioNTech vaccine
ಬ್ರಿಟನ್, ಡಿಸೆಂಬರ್23: ಬ್ರಿಟನ್ನಲ್ಲಿ ಕೊರೋನವೈರಸ್ ರೂಪಾಂತರ ಪತ್ತೆಯಾದ ಬೆನ್ನಲ್ಲೇ ಕೊರೋನವೈರಸ್ ವಿರುದ್ಧದ ಲಸಿಕೆಯೇ ಹೊಸ ರೂಪಾಂತರದ ವಿರುದ್ಧವೂ ಕಾರ್ಯನಿರ್ವಹಿಸುತ್ತದೆ ಎಂದು ಬಯೋಎನ್ಟೆಕ್ನ ಸಹ-ಸಂಸ್ಥಾಪಕ ಮಂಗಳವಾರ ಹೇಳಿದ್ದಾರೆ. BioNTech vaccine
ಆದರೆ ಅಗತ್ಯವಿದ್ದರೆ, ಆರು ವಾರಗಳಲ್ಲಿ ಹೊಸ ಸ್ವರೂಪದ ವೈರಸ್ ಗೂ ಲಸಿಕೆಯನ್ನು ಕಂಡು ಹಿಡಿಯಬಹುದು ಎಂದು ಅವರು ಹೇಳಿದ್ದಾರೆ.
ವೈಜ್ಞಾನಿಕವಾಗಿ, ಈ ಲಸಿಕೆಯ ಪ್ರತಿರಕ್ಷಣಾ ಪ್ರತಿಕ್ರಿಯೆಯು ಹೊಸ ವೈರಸ್ ರೂಪಾಂತರವನ್ನು ಸಹ ನಿಭಾಯಿಸುತ್ತದೆ. ಈ ಬಗ್ಗೆ ಸಂದೇಹ ಬೇಡ ಎಂದು ಬಯೋಎನ್ಟೆಕ್ನ ಸಹ ಸಂಸ್ಥಾಪಕ ಸಾಹಿನ್ ಹೇಳಿದ್ದಾರೆ
ಆದರೆ ಅಗತ್ಯವಿದ್ದರೆ, ಈ ಹೊಸ ರೂಪಾಂತರದ ವೈರಸ್ ಚಿಕಿತ್ಸೆಗೆ ಲಸಿಕೆಯನ್ನು ನಾವು ಕಂಡು ಹಿಡಿಯಬಹುದು. ಆರು ವಾರಗಳಲ್ಲಿ ನಾವು ಹೊಸ ಲಸಿಕೆಯನ್ನು ತಾಂತ್ರಿಕವಾಗಿ ಒದಗಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ರೂಪಾಂತರಗಳು ಕಾಣಿಸಿಕೊಂಡಿದ್ದು, ಬ್ರಿಟನ್ನಲ್ಲಿ ಪತ್ತೆಯಾದ ರೂಪಾಂತರವು ಒಂಬತ್ತು ರೂಪಾಂತರಗಳನ್ನು ಹೊಂದಿದೆ ಎಂದು ಸಾಹಿನ್ ಹೇಳಿದ್ದಾರೆ.
ಅದೇನೇ ಇದ್ದರೂ, ಫಿಜರ್ನೊಂದಿಗೆ ಅಭಿವೃದ್ಧಿಪಡಿಸಿದ ಲಸಿಕೆ ಪರಿಣಾಮಕಾರಿಯಾಗಿರುತ್ತದೆ. ಏಕೆಂದರೆ ಅದು 1,000 ಕ್ಕೂ ಹೆಚ್ಚು ಅಮೈನೋ ಆಮ್ಲಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಒಂಬತ್ತು ಮಾತ್ರ ಬದಲಾಗಿದೆ. ಆದ್ದರಿಂದ 99 ಪ್ರತಿಶತದಷ್ಟು ಪ್ರೋಟೀನ್ ಇನ್ನೂ ಒಂದೇ ಆಗಿರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೂಪಾಂತರದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಎರಡು ವಾರಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಲಸಿಕೆ ರಕ್ಷಿಸಬಹುದೆಂದು ನಮಗೆ ವೈಜ್ಞಾನಿಕ ವಿಶ್ವಾಸವಿದೆ ಆದರೆ ಪ್ರಯೋಗ ಮಾಡಿದರೆ ಮಾತ್ರ ನಾವು ಅದನ್ನು ತಿಳಿಯಲು ಸಾಧ್ಯ ..ಸಾಧ್ಯವಾದಷ್ಟು ಬೇಗ ನಾವು ಡೇಟಾವನ್ನು ಪ್ರಕಟಿಸುತ್ತೇವೆ ಎಂದು ಅವರು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಾಲು ಬೆರೆಸದ ಚಹಾ ಅಥವಾ ಕಪ್ಪು ಚಹಾ ಎಷ್ಟು ಪ್ರಯೋಜನಕಾರಿ ಗೊತ್ತಾ ? https://t.co/VotFsVG3Ld
— Saaksha TV (@SaakshaTv) December 22, 2020
ಚೀನಾದಲ್ಲಿ ಹೆಚ್ಚು ಚರ್ಚಿಸಲಾಗುವ ಭಾರತದ ಶಸ್ತ್ರಾಸ್ತ್ರಗಳು ಯಾವುದೆಂದು ಗೊತ್ತಾ ?https://t.co/vtj3IfwWx4
— Saaksha TV (@SaakshaTv) December 22, 2020