Cobra | ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು
ಕಲಬುರಗಿ : ಜಮೀನಿನಲ್ಲಿ ಮಲಗಿದ್ದ ಮಹಿಳೆಯ ಮೇಲೆ ನಾಗರಹಾವೊಂದು ಎಡೆ ಎತ್ತಿ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಲಬುರಗಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಭಾಗಮ್ಮ ಎಂಬುವವರು ಜಮೀನಿನಲ್ಲಿ ಮಲಗಿದ್ದರು.
ಈ ವೇಳೆ ಅವರ ಮೇಲೆ ನಾಗರಹಾವೊಂದು ಹತ್ತಿ ಎಡೆ ಎತ್ತಿ ಕಳಿತುಕೊಂಡಿದೆ.

ಇದರಿಂದ ಗಾಬರಿಗೊಂಡ ಭಾಗಮ್ಮ ಸ್ಥಳದಿಂದ ಒಂದು ಚೂರು ಕದಡದೇ ಮಲಗಿದ್ದ ಜಾಗದಲ್ಲಿಯೇ ಕಾಪಾಡು ಶ್ರೀಶೈಲ ಮಲ್ಲಯ್ಯ ಎಂದು ಪ್ರಾರ್ಥಿಸಿದ್ದಾರೆ.
ಭಾಗಮ್ಮ ಮೇಲೆ ಎಡೆ ಎತ್ತಿ ಕೂತಿದ್ದ ಹಾವು ಕೆಲಹೊತ್ತಿನ ನಂತರ ಅಲ್ಲಿಂದ ಹೋಗಿದೆ.
ಕಲಬುರಗಿಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.








