ತೆಂಗಿನಕಾಯಿ ದರ ಇತಿಹಾಸದಲ್ಲೇ ಕಂಡಿಲ್ಲದ ಮಟ್ಟಕ್ಕೆ ಏರಿಕೆ ಕಂಡಿದ್ದು, ನೂರರ ಗಡಿ ದಾಟುವ ಅಂಚಿಗೆ ಬಂದಿದೆ. ಸಾಮಾನ್ಯವಾಗಿ 1 ಕೆ.ಜಿ ತೆಂಗಿನಕಾಯಿಗೆ 30 ರಿಂದ 40 ರೂ.ಗಳ ಮಧ್ಯೆ ಇರುತ್ತಿದ್ದರೆ, ಇದೀಗ ಇದರ ದರವು ದ್ವಿಗುಣವಾಗಿ ₹70 ರಿಂದ ₹80 ರೂಗೆ ತಲುಪಿದೆ.
ಈ ಭಾರೀ ಏರಿಕೆಯಿಂದ ತೆಂಗು ಬೆಳೆಗಾರರ ಮುಖದಲ್ಲಿ ಸಂತೋಷದ ನಗು ಮೂಡಿದೆಯಾದರೂ, ಗ್ರಾಹಕರಿಗಂತು ಭಾರೀ ಹೊರೆ ಆಗಿದೆ. ಮನೆಯ ದಿನಬಳಕೆಯ ಅಗತ್ಯವಸ್ತುಗಳಲ್ಲಿ ತೆಂಗಿನಕಾಯಿ ಮುಖ್ಯವಾದುದಾಗಿ ಪರಿಗಣಿಸಲಾಗುತ್ತೆ, ಈ ದರ ಏರಿಕೆ ಮಿಡಲ್ ಕ್ಲಾಸ್ ಜನತೆಗೆ ಜೇಬಿಗೆ ಹೊರೆ ಉಂಟು ಮಾಡುತ್ತಿದೆ.
ಕೇವಲ ತೆಂಗಿನಕಾಯಿ ಮಾತ್ರವಲ್ಲ, ಕೊಬ್ಬರಿ ಎಣ್ಣೆ ದರವೂ ಏರಿಕೆ
ಈ ಮೊದಲು ತೆಂಗಿನ ಎಣ್ಣೆ 220-250 ರೂ.ಗಳ ಮದ್ಯೆ ಲಭ್ಯವಿದ್ದರೆ, ಈಗ ಒಂದು ಲೀಟರ್ ಕೊಬ್ಬರಿ ಎಣ್ಣೆಗೆ ₹310 ರೂ. ದರ ಜನರನ್ನು ಬೆಚ್ಚಿ ಬೀಳಿಸಿದೆ. ಇದರ ಪರಿಣಾಮವಾಗಿ ಹೋಟೆಲ್, ಬೇಕರಿ ಉದ್ಯಮಗಳು, ಹಾಗೂ ಅಡುಗೆ ತೈಲಕ್ಕೆ ಅವಲಂಬಿತ ಮನೆಗಳು ತೊಂದರೆಗಳು ಒಳಗಾಗುವ ಸಾಧ್ಯತೆಯಿದೆ.








