ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್’ನ ನೂತನ ಸಿಇಒ ಆಗಿ ಮಾಳವಿಕಾ ಸಿದ್ಧಾರ್ಥ್
ಬೆಂಗಳೂರು, ಡಿಸೆಂಬರ್09: ಸೋಮವಾರ, ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಕಂಪನಿಯ ಮಂಡಳಿಯು ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ್ ರವರ ಪತ್ನಿ ಮಾಳವಿಕಾ ಹೆಗ್ಡೆ ಅವರ ನೇಮಕಕ್ಕೆ ಅನುಮೋದನೆ ನೀಡಿದೆ ಎಂದು ತಿಳಿಸಿದೆ. ಮಾಳವಿಕಾ ಸಿದ್ಧಾರ್ಥ್ ಅವರು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ತಕ್ಷಣದಿಂದ ಅಧಿಕಾರ ವಹಿಸಲಿದ್ದಾರೆ.

ಜುಲೈ 2019 ರಲ್ಲಿ ಎಸ್.ವಿ. ಸಿದ್ಧಾರ್ಥ್ ಅವರು ಮಂಗಳೂರು ನೇತ್ರಾವತಿ ಸೇತುವೆ ಬಳಿ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದು, ಬಳಿಕ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆ ಬಳಿಕ ರಂಗನಾಥ್ ಅವರನ್ನು ಸ್ವತಂತ್ರ ಮಂಡಳಿಯ ಸದಸ್ಯರನ್ನಾಗಿ ಹೆಸರಿಸಲಾಯಿತು.
ರಕ್ತದಾನ ಶಿಬಿರದಲ್ಲಿ ಭಾಗವಹಿಸುವವರಿಗೆ ಕೋಳಿ/ ಪನೀರ್ ವಿತರಣೆ
ಸಿದ್ಧಾರ್ಥ್ ಸಾವಿನ ಬಗ್ಗೆ ಹೆಚ್ಚಿದ ಊಹಾಪೋಹಗಳು ಕಂಪನಿಯ ಷೇರುಗಳು ಕುಸಿಯಲು ಕಾರಣವಾಗಿತ್ತು ಮತ್ತು ಕಂಪನಿಯು ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಕೆಫೆ ಕಾಫಿ ಡೇ ಎಂಬ ಬ್ರಾಂಡ್ ಅಡಿಯಲ್ಲಿ ಭಾರತದಾದ್ಯಂತ ನೂರಾರು ಕಾಫಿ ಅಂಗಡಿಗಳನ್ನು ನಡೆಸುತ್ತಿರುವ ಬೆಂಗಳೂರು ಮೂಲದ ಘಟಕವು ತನ್ನ ಕಂಪನಿಯ ನಿರ್ದೇಶಕ ಮಂಡಳಿಯಲ್ಲಿ ಸಿ.ಎಚ್.ವಸುಂಧರಾ ದೇವಿ, ಗಿರಿ ದೇವನೂರ್, ಮೋಹನ್ ರಾಘವೇಂದ್ರ ಕೊಂಡಿ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡಿದೆ ಎಂದು ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1336360172843749377?s=19
https://twitter.com/SaakshaTv/status/1336360541544058880?s=19








