ಚಳಿ ಗಾಳಿಗೆ ತತ್ತರಿಸಿದ ಉತ್ತರ ಭಾರತ…
ಉತ್ತರ ಭಾರತದ ಹಲವಾರು ಭಾಗಗಳು ತೀವ್ರ ಚಳಿಗೆ ತತ್ತರಿವೆ. ತಾಪಮಾನವು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಚಳಿ ದಾಖಲಾಗುತ್ತಿದೆ.
ಮುಂದಿನ ಎರಡರಿಂದ ಮೂರು ದಿನಗಳಲ್ಲಿ, ಹಿಮದಿಂದ ಆವೃತವಾದ ತಂಪಾದ ವಾಯುವ್ಯ ಗಾಳಿ ಬಿಸುವ ಕಾರಣ, ಭಾರತದ ಕನಿಷ್ಠ ತಾಪಮಾನವು ಕ್ರಮೇಣ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಹಿಮಾಚಲ ಪ್ರದೇಶವು ಜನವರಿ 24 ರವರೆಗೆ ಅತಿಯಾದ ಚಳಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು IMD ಶುಕ್ರವಾರ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.
ಈ ಸಮಯದಲ್ಲಿ ಭಾರತದ ಅತ್ಯಂತ ತಂಪಾದ ಸ್ಥಳಗಳು ಇಲ್ಲಿವೆ:
- ದ್ರಾಸ್ (ಲಡಾಖ್): ಶುಕ್ರವಾರದಂದು ಕನಿಷ್ಠ ತಾಪಮಾನವು ಮೈನಸ್ 17 ಡಿಗ್ರಿ ಸೆಲ್ಸಿಯಸ್ ತಲುಪಿದೆ.
- ಪಹಲ್ಗಾಮ್ (ಜಮ್ಮು ಮತ್ತು ಕಾಶ್ಮೀರ): ಹವಮಾನ ಇಲಾಖೆ ಪ್ರಕಾರ, ಪರ್ವತ ರೆಸಾರ್ಟ್ ಶುಕ್ರವಾರ ರಾತ್ರಿ ಕನಿಷ್ಠ ಮೈನಸ್ 13 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ.
- ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ನಗರದಲ್ಲಿ ಕನಿಷ್ಠ ಮೈನಸ್ 4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
- ರಾಜಸ್ಥಾನ: ರಾಜಧಾನಿ ಜೈಪುರ ಸೇರಿದಂತೆ ರಾಜ್ಯದ ಹಲವೆಡೆ ದಟ್ಟವಾದ ಮಂಜು ಆವರಿಸಿದ್ದು, ಕನಿಷ್ಠ ತಾಪಮಾನ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ. ಚಿತ್ತೋರ್‌ಗಢದಲ್ಲಿ 6.8 ಡಿಗ್ರಿ ಸೆಲ್ಸಿಯಸ್‌ನ ಕನಿಷ್ಠ ತಾಪಮಾನ ದಾಖಲಾಗಿದ್ದು, ನಂತರ ಭಿಲ್ವಾರಾ ಮತ್ತು ವನಸ್ಥಲಿಯಲ್ಲಿ ತಲಾ 8.0 ಡಿಗ್ರಿ, ಜೈಪುರ ಮತ್ತು ಸಂಗರಿಯಾದಲ್ಲಿ 8.1 ಡಿಗ್ರಿ, ಸಿಕರ್‌ನಲ್ಲಿ 8.5 ಡಿಗ್ರಿ, ಬಿಕಾನೇರ್‌ನಲ್ಲಿ 8.7 ಡಿಗ್ರಿ, ಟೋಂಕ್‌ನಲ್ಲಿ 8.8 ಡಿಗ್ರಿ ಮತ್ತು ನಾಗೂರ್‌ನಲ್ಲಿ 9.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
- ದೆಹಲಿ: ನಗರದಲ್ಲಿ ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವ ಒಂದು ದಿನದ ನಂತರ, ರಾಷ್ಟ್ರ ರಾಜಧಾನಿ ಶನಿವಾರ ಬೆಳಿಗ್ಗೆ ಮಂಜು ಮುಸುಕಿದೆ.








