ಬೆಂಗಳೂರು: ಬೆಂಗಳೂರು (Bengaluru) ನಗರದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ 12 ಡಿಗ್ರಿಗೆ ತಾಪಮಾನ ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ (Silicon City) ಚಳಿ ಜಾಸ್ತಿಯಾಗುತ್ತಿದ್ದು, ಸಂಜೆಯಿಂದಲೇ ಚಳಿ ಪ್ರಾರಂಭವಾಗುತ್ತಿದೆ. ರಾಜ್ಯಕ್ಕೆ ಮಾಗಿ ಚಳಿ ಬೇಗ ಆಗಮಿಸಿದ್ದು, ಇದರ ಪರಿಣಾಮ ಚಳಿ ಜೊತೆಗೆ ಮಧ್ಯರಾತ್ರಿ ಇಬ್ಬನಿ ಕೂಡ ಶುರುವಾಗಿದೆ. ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಬೆಂಗಳೂರು ತಾಪಮಾನ 12 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ. ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಜಾಸ್ತಿ ಆಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಲಾ ನಿನೊ ಸ್ಥಿತಿಯಿಂದಾಗಿ ಈ ಬಾರಿ ಚಳಿ ಪ್ರಮಾಣ ತೀವ್ರಗೊಂಡಿದೆ.








