ಇಲ್ಲಿವೆ ನೋಡಿ ಕಲರ್ ಕಲರ್ ಮೆಣಸಿನಕಾಯಿಗಳು..!
ಸಾಮಾನ್ಯವಾಗಿ ನಾವು, ನೀವು ಕೆಂಪು ಅಥವಾ ಹಸಿರು ಬಣ್ಣದ ಮೆಣಸಿಣಕಾಯಿಗಳನ್ನು ನೋಡಿರುತ್ತೇವೆ. ಆದ್ರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಲರ್ ಕಲರ್ ಮೆಣಸಿಣಕಾಯಿಗಳ ಚಿತ್ರಗಳು ಭಾರಿ ವೈರಲ್ ಆಗುತ್ತಿದೆ.
ಟ್ವಿಟ್ಟರ್ ನಲ್ಲಿ ಮಿರ್ಯಾಮ್ ಎನ್ನುವವರು ತಮ್ಮ ಖಾತೆಯಲ್ಲಿ ಈ ಸುಂದರವಾದ ಮೆಣಸಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ನೆಟ್ಟಿಗರು ಕಲರ್ ಕಲರ್ ಮೆಣಸಿನಕಾಯಿಗಳಿಗೆ ಫಿದಾ ಆಗಿದ್ದು, ಇಷ್ಟೊಂದು ಸುಂದರವಾದ ಮೆಣಸಿಕಾಯಿಯನ್ನು ನೋಡಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.








