ಮಡಿಕೇರಿ: ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಒಂದಾದ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ಉದ್ಯಾನವನಕ್ಕೆ ಪ್ರವಾಸಿಗರಿಗೆ ಮುಕ್ತ ಮಾಡಿರುವ ಬೆನ್ನಲ್ಲೇ ಇಲ್ಲಿನ ಸಂಗೀತ ಕಾರಂಜಿ ಪ್ರಮುಖ ಆಕರ್ಷಣೆಯಾಗಿದೆ.

ಸಂಜೆ 6.30 ರಿಂದ 7.30ರ ವರೆಗೆ ಪ್ರದರ್ಶನಕ್ಕೆ ತಲಾ ಅರ್ಧಗಂಟೆವರೆಗೆ ಸಂಗೀತ ಕಾರಂಜಿಯನ್ನು ಸೀಮಿತಗೊಳಿಸಲಾಗಿದೆ. ನಾಡಗೀತೆಯಿಂದ ಆರಂಭವಾಗಿ, ವಿವಿಧ ಚಲನಚಿತ್ರಗೀತೆಗಳ ಜೊತೆಗೆ ಉತ್ತಮ ಧ್ವನಿವರ್ಧಕ ಸಹಾಯದಿಂದ 10 ಹಾಡುಗಳಿಗೆ ಬಣ್ಣಬಣ್ಣದ ಬೆಳಕಿನ ನಡುವೆ ವೈಯಾರದಿಂದ ಕುಣಿಯುವ ನೀರಿನ ಕಾರಂಜಿ ಪ್ರೇಕ್ಷಕರ ಮೇಲೆ ನೀರಿನ ಸಿಂಚನ ಮಾಡುತ್ತಾ ಗಮನ ಸೆಳೆಯುತ್ತಿದೆ.

ಕೊರೊನಾ ಮತ್ತು ಕೆಲವೊಂದು ಭದ್ರತಾ ದೃಷ್ಠಿಯಿಂದ ಸ್ಥಗಿತಗೊಂಡಿದ್ದ ಉದ್ಯಾನವನ ಪ್ರವೇಶ ವೀಕೆಂಡ್ ನಲ್ಲಿ ಪ್ರವಾಸಿಗರಿಗೆ ಮಜಾ ನೀಡುತ್ತದೆ.
ವಯಸ್ಕರಿಗೆ 10ರೂ. ಮಕ್ಕಳಿಗೆ 5 ರೂಪಾಯಿಯಂತೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಸಂಜೆಗತ್ತಲಿನಲ್ಲಿ ಈ ಪ್ರದರ್ಶನ ನಡೆಯುವುದರಿಂದ ಯಾವುದೇ ಬಸ್ ಸೌಕರ್ಯವಿಲ್ಲ. ಕುಶಾಲನಗರ ಇಲ್ಲವೇ ಗುಡ್ಡೆಹೊಸೂರು ಭಾಗದಿಂದ ಆಟೋಗಳ ಓಡಾಟ ಇರುತ್ತದೆ. ಇಲ್ಲವೇ ಸ್ವಂತ ವಾಹನದಲ್ಲಿ ತೆರಳುವುದೇ ಉತ್ತಮ.

ಸದ್ಯಕ್ಕೆ ಭದ್ರತೆ ದೃಷ್ಟಿಯಿಂದ ಡ್ಯಾಂ ಮೇಲೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಸಂಗೀತ ಕಾರಂಜಿ ಸಮಯಕ್ಕಿಂತ ಸ್ವಲ್ಪ ಹೊತ್ತಿನ ಮೊದಲು ತೆರಳಿದರೆ ಇಲ್ಲಿನ ಉದ್ಯಾನವದಲ್ಲಿ ಅಡ್ಡಾಡಿ, ಮಕ್ಕಳಿಗೆ ಇರುವ ಪ್ರತ್ಯೇಕ ಆಟದ ಉದ್ಯಾನವದಲ್ಲಿ ಮಸ್ತಿ ಮಾಡಬಹುದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








