ಬಟ್ಟೆ ಖರೀದಿಯ ನೆಪದಲ್ಲಿ ಬಂದು ಕೊಲೆ ಮತ್ತು ದರೋಡೆ ಮಾಡಿ ಪರಾರಿ.
ಸೀರೆ ಕೊಳ್ಳುವ ನೆಪದಲ್ಲಿ ಬಂದು ಕೊಲೆ ಮತ್ತು ದರೊಡೆ ಮಾಡಿರುವ ಘಟನೆ ವಿಜಯನಗೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿದೆ. ರಾಣಿಪೇಟೆ ಏರಿಯಾದಲ್ಲಿರು ಅಂಗಡಿಯೊಂದಕ್ಕೆ ಬಟ್ಟೆ ಖರೀದಿಯ ನೆಪದಲ್ಲಿ ಬಂದು ಈ ಕೃತ್ಯವನ್ನ ಎಸೆದಿದ್ದಾರೆ.
ಘಟನೆಯಲ್ಲಿ ಭುವನೇಶ್ವರಿ ಎನ್ನವ 68 ವರ್ಷದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಶಿವಭೂಷಣಮ್ಮ ಎನ್ನುವವರು ಗಾಯಗೊಂಡಿದ್ದಾರೆ ಅವರನ್ನ ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಘಟನೆ ನಂತರ ದೂರು ದಾಖಲಿಸುರುವ ಪೊಲೀಸರು ಮೂರು ತಂಡಗಳನ್ನ ರಚಿಸಿ ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯನಗರದ ಎಸ್ಪಿ ಡಾ. ಅರುಣ್ ಕೆ ಅವರು… ಹೊಸಪೇಟೆ ಗ್ರಾಮೀಣ, ನಗರ, ಮತ್ತು ಚಿತ್ತವಾಡ್ಗಿ ಪಿಐಗಳ ನೇತೃತ್ವದಲ್ಲಿ ಮೂರು ತಂಡ ರಚಿಸಿದ್ದೇವೆ ಎಂದು ಹೇಳಿದರು. ದರೋಡೆಗೆ ಬಂದವರು 3 ಲಕ್ಷ ರೂ. ಹಣ, ಮತ್ತು 100 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ..