ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜು ಶ್ರೀವಾತ್ಸವ್ ನಿಧನ
ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜು ಶ್ರೀವಾತ್ಸವ್ ಅವರು ಇಂದು ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜು ಅವರಿಗೆ 58 ವರ್ಷ ವಯಸ್ಸಾಗಿದ್ದು ಹೃದಯಾಘಾತದ ನಂತರ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ದೆಹಲಿಯ ಏಮ್ಸ್ ಆಸ್ಪತ್ರಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತತು.
42 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಆಗಸ್ಟ್ 10 ರಿಂದ ವೆಂಟಿಲೇಟರ್ ನಲ್ಲಿದ್ದರು. ನಟ ರಾಜು ಶ್ರೀವಾತ್ಸವ್ ಅವರು ಶಿಖಾ, ಮಗಳು ಅಂತರಾ, ಪುತ್ರ ಆಯುಷ್ಮಾನ್, ಹಿರಿಯ ಸಹೋದರ ಸಿಪಿ ಶ್ರೀವಾಸ್ತವ್, ಕಿರಿಯ ಸಹೋದರ ದೀಪು ಶ್ರೀವಾಸ್ತವ್, ಅವರನ್ನು ಅಗಲಿದ್ದಾರೆ.
2014 ರಲ್ಲಿ bjp ಸೇರಿದ್ದ ರಾಜು ಶ್ರೀವಾತ್ಸವ್ ಅವರು ಕೆಲಸದ ನಿಮಿತ್ತ ಹಿರಿಯ ನಾಯಕರನ್ನ ಬೇಟಿಯಾಗಲು ದೆಹಲಿಗೆ ಬಂದಿದ್ದರು. ಆಗಸ್ಟ್ 10 ರಂದು ಬೆಳಿಗ್ಗೆ ದೆಹಲಿಯ ಸೌತ್ ಎಕ್ಸ್‌ನ ಕಲ್ಟ್ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಟ್ರೆಡ್ ಮಿಲ್ ನಲ್ಲಿ ಓಡುತ್ತಿದ್ದಾಗ ಎದೆಯಲ್ಲಿ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಜು ಶ್ರೀವಾಸ್ತವ್ ಅವರ ನಿಜವಾದ ಹೆಸರು ಸತ್ಯ ಪ್ರಕಾಶ್ ಶ್ರೀವಾಸ್ತವ. ಅವರು 25 ಡಿಸೆಂಬರ್ 1963 ರಂದು ಕಾನ್ಪುರದ ನಯಪೂರ್ವದಲ್ಲಿ ಜನಿಸಿದರು. 1980 ರಲ್ಲಿ ಕಾನ್ಪುರದಿಂದ ಮನೆ ಬಿಟ್ಟು ಓಡಿ ಬಂದಿದ್ದ ಅವರು 1993 ರಲ್ಲಿ ಹಾಸ್ಯ ಪ್ರಪಂಚವನ್ನ ಪ್ರವೇಶಿಸಿದ್ದರು.
ರಾಜು ಶ್ರೀವಾಸ್ತವ ಅವರು ಮೈನೆ ಪ್ಯಾರ್ ಕಿಯಾ, ಬಾಜಿಗರ್, ಬಾಂಬೆ ಟು ಗೋವಾ ಮತ್ತು ಆಮ್ದಾನಿ ಅತ್ತನ್ನಿ ಖರ್ಚಾ ರುಪಯ್ಯ ಸೇರಿದಂತೆ ಹಲವಾರು ಚಿತ್ರಗಲ್ಲಿ ಹಾಸ್ಯ ಪಾತ್ರದಲ್ಲಿ ರಂಜಿಸಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಎಂಬ ಕಾಮಿಡಿ ಶೋನಲ್ಲಿ ಭಾಗವಹಿಸಿದ ನಂತರ ಅವರು ಮನೆಮಾತಾಗಿದ್ದರು.