ಚೆನ್ನೈ: ತಮಿಳಿನ ಖ್ಯಾತ ಹಾಸ್ಯ ನಟ ವಾಡಿವೇಲ್ ಬಾಲಾಜಿ ಹೃದಯಘಾತವಾಗಿ ಇಂದು ವಿಧಿವಶರಾಗಿದ್ದಾರೆ. ಸಿನಿಮಾ ಸೇರಿದಂತೆ, ಕಿರುತೆರೆಯಲ್ಲೂ ಬಣ್ಣಹಚ್ಚಿ ಅತ್ಯಂತ ಜನಪ್ರಿಯತೆ ಗಳಿಸಿದ್ದ 45 ವರ್ಷದ ವಾಡಿವೇಲ್ ಬಾಲಾಜಿ ತೀವ್ರ ಅನಾರೋಗ್ಯದಿಂದ ಕಳೆದ 15 ದಿನಗಳ ಹಿಂದೆ ಚೆನ್ನೈನ ಸರ್ಕಾರಿ ಹಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಅದು ಇದು ಎದು” ಕಾರ್ಯಕ್ರಮದ ಮೂಲಕ ಹಾಸ್ಯದಿಂದ ಸಾವಿರಾರು ಜನರ ಮೊಗದಲಿ ನಗು ತರಿಸಿದ್ದ ಬಾಲಾಜಿ ಕೆಲ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.








