Karnataka | ಮತ್ತೊಂದು ಇಲಾಖೆಯ 40% ಕಮಿಷನ್ ಭ್ರಷ್ಟಾಚಾರ ಬೆಳಕಿಗೆ
ಬೆಂಗಳೂರು : ಕಮಿಷನ್ ವಿಚಾರವಾಗಿ ರಾಜ್ಯದಲ್ಲಿ ಭಾರಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ – ಬಿಜೆಪಿ ಪಕ್ಷಗಳು ಸಿಕ್ಕಸಿಕ್ಕಲ್ಲಿ ಕಚ್ಚಾಡುತ್ತಿವೆ.
ಇವರ ಮುಂದುವರೆದ ಭಾಗವಾಗಿ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ, ಪ್ರವಾಸೋಧ್ಯಮ ಇಲಾಖೆಯ ಜಂಗಲ್ ಲಾಡ್ಜ್ ಗಳ ಟೆಂಡರ್ ವಿಚಾರವಾಗಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಟ್ವೀಟ್ ನಲ್ಲಿ.. ಭ್ರಷ್ಟ ಬಿಜೆಪಿ ಸರ್ಕಾರದ ಮತ್ತೊಂದು ಇಲಾಖೆಯ 40% ಕಮಿಷನ್ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.
ಈ ಸರ್ಕಾರದಲ್ಲಿ ಯಾವೊಂದು ಇಲಾಖೆಯೂ ‘ಕಮಿಷನ್’ ನಿಂದ ಹೊರತಾಗಿಲ್ಲ.
ಪ್ರವಾಸೋದ್ಯಮ ಇಲಾಖೆಯು ಜಂಗಲ್ ಲಾಡ್ಜ್ಗಳ ಟೆಂಡರ್ ಪ್ರಕ್ರಿಯೆ ಮುಗಿದಮೇಲೆ ಒಪ್ಪಂದ ಪ್ರಕ್ರಿಯೆ ಸ್ವತಃ ಸಚಿವರೇ ತಡೆಹಿಡಿದಿದ್ದು ‘ಕಮಿಷನ್ ಚೌಕಾಶಿ’ ವ್ಯವಹಾರಕ್ಕಾಗಿಯೇ ಎಂದು ಪ್ರಶ್ನಿಸಿದೆ.
ಇದಲ್ಲದೇ ಬೆಳಗಾವಿ ಕಂಟ್ರಾಕ್ಟರ್ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿರುವ ಬಗ್ಗೆ ಟ್ವೀಟ್ ಮಾಡಿ, ಸಂತೋಷ್ ಪಾಟೀಲ್ ನಂತರ ಮತ್ತೊಬ್ಬ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಜ್ಜೆಗೆಟ್ಟ ಬಿಜೆಪಿ ಸರ್ಕಾರದ 40% ಕಮಿಷನ್ ಕಾಟಕ್ಕೆ ಗುತ್ತಿಗೆದಾರರೆಲ್ಲರೂ ಬೇಸತ್ತಿರುವುದು, ಸಂಕಷ್ಟಕ್ಕೆ ಈಡಾಗಿರುವುದು ಲೋಕಸತ್ಯ. ಈ ಆತ್ಮಹತ್ಯೆಗೂ 40% ಕಮಿಷನ್ ಕಾರಣವಿರುವ ಸಾಧ್ಯತೆ ದಟ್ಟವಾಗಿದೆ, ಈ ಸಾವನ್ನೂ ಸಹ ಗಂಭೀರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.










