Commonwealth Games 2022 – ಕಾಮನ್‌ವೆಲ್ತ್ ಗೇಮ್ಸ್‌ನಿಂದ ನೀರಜ್ ಚೋಪ್ರಾ ಔಟ್
ಕಾಮನ್ ವೆಲ್ತ್ ಗೇಮ್ ಆರಂಭಕ್ಕೂ ಮುನ್ನವೇ ಭಾರತ ನಿರಾಸೆ ಅನುಭವಿಸಿದೆ. ಜುಲೈ 28 ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ಶುರುವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆಗಾರ ನೀರಜ್ ಚೋಪ್ರಾ ಹೊರಬಿದ್ದಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಾವೆಲಿನ್ ಎಸೆಯುವ ವೇಳೆ ನೀರಜ್ ಚೋಪ್ರಾ ಎಡಕಾಲಿನ ತೊಡೆಭಾಗದ ಗಾಯಕ್ಕೆ ಒಳಗಾಗಿದ್ದರು. ಆದಾಗ್ಯೂ ಬ್ಯಾಂಡೇಜ್ ಕಟ್ಟಿಕೊಂಡು ಜಾವೆಲ್ ಎಸೆದು ಭಾರತಕ್ಕೆ ಬೆಳ್ಳಿ ಪದಕವನ್ನ ತಂದುಕೊಟ್ಟಿದ್ದರು.
ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಬರ್ಮಿಂಗ್ಹ್ಯಾಮ್ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ತೊಡೆ ಭಾಗದಲ್ಲಿ ಗಾಯವಾಗಿದ್ದು ಕಾಮನ್‌ವೆಲ್ತ್ ಗೇಮ್ಸ್ ಭಾಗವಹಿಸುವುದು ಸೂಕ್ತವಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ನಂತರ, ನೀರಜ್ ಚೋಪ್ರಾಗೆ ಎಂಆರ್ಐ ಸ್ಕ್ಯಾನ್ ಮಾಡಲಾಗಿತ್ತು. ಅದರಲ್ಲಿ ಅವರ ತೊಡೆಸಂದು ಭಾಗಕ್ಕೆ ಗಂಭೀರ ಗಾಯವಾಗಿರುವುದು ಕಂಡು ಬಂದಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀರಜ್ ಗೈರುಹಾಜರಾಗಿರುವುದನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಖಚಿತಪಡಿಸಿದ್ದಾರೆ..
Neeraj Chopra Ruled Out Of 2022 Commonwealth Games Due To Injury