ಪ್ರಿಯಾಂಕಾ ಗಾಂಧಿಯನ್ನು ರಾಣಿ ಚೆನ್ನಮ್ಮಗೆ ಹೋಲಿಸುವ ಮೂಲಕ ದೇಶದ ಐತಿಹಾಸಿಕ ನಾಯಕಿ ಚೆನ್ನಮ್ಮಗೆ ಅವಮಾನ ಮಾಡಲಾಗಿದೆ ಎಂದು BJP ನಾಯಕ ಮತ್ತು MLC CT ರವಿ, ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು BJP ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ CT ರವಿ, “ಮಲ್ಲಿಕಾರ್ಜುನ ಖರ್ಗೆಯ ಈ ಹೇಳಿಕೆ ಹೊಗಳುವ ಭರದಲ್ಲಿ ವ್ಯಕ್ತವಾದ ಮಾನಸಿಕ ಗುಲಾಮಗಿರಿಯಾಗಿದ್ದು, ಇದು ಸಂಪೂರ್ಣ ಭಟ್ಟಂಗಿತನದ ಪ್ರತೀಕವಾಗಿದೆ. ಖರ್ಗೆ ಅವರು ಐತಿಹಾಸಿಕ ವ್ಯಕ್ತಿತ್ವವನ್ನೂ, ರಾಷ್ಟ್ರೀಯ ಹೆಮ್ಮೆಯನ್ನು ಅವಮಾನ ಮಾಡಿದ್ದಾರೆ” ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು.
ನಾಡಿನ ಜನತೆಗೆ ಕ್ಷಮೆ ಕೋರಬೇಕು
ರಾಣಿ ಚೆನ್ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಮೊದಲ ಯೋಧರಲ್ಲೊಬ್ಬರು. ಇಂತಹ ಐತಿಹಾಸಿಕ ವ್ಯಕ್ತಿತ್ವವನ್ನು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಹೋಲಿಸುವುದು ಭಾರತೀಯ ಸಂಸ್ಕೃತಿಯ ಅವಹೇಳನವಾಗಿದೆ. ಖರ್ಗೆಯ ಈ ಹೇಳಿಕೆ ನಾಡಿನ ಜನರ ಹೆಮ್ಮೆಗೆ ಧಕ್ಕೆ ಉಂಟುಮಾಡಿದೆ. ಈ ಕಾರಣಕ್ಕಾಗಿ ಅವರು ತಕ್ಷಣವೇ ಕ್ಷಮೆ ಕೋರಬೇಕು ಎಂದು CT ರವಿ ಆಗ್ರಹಿಸಿದ್ದಾರೆ.
ಈ ಹೇಳಿಕೆಯಿಂದಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ರಾಜಕೀಯ ವಾದ ಮತ್ತೆ ತೀವ್ರಗೊಂಡಿದೆ. ರಾಣಿ ಚೆನ್ನಮ್ಮನಂತಹ ಐತಿಹಾಸಿಕ ವ್ಯಕ್ತಿತ್ವವನ್ನು ರಾಜಕೀಯ ಹೊಗಳಿಕೆಗೆ ಬಳಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವ ವಿರೋಧಪಕ್ಷಗಳು, ಖರ್ಗೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿವೆ.








