ಶ್ರೇಯಸ್ ಅಯ್ಯರ್ ಗಾಗಿ ಫ್ರಾಂಚೈಸಿಗಳ ಪೈಪೋಟಿ Shreyas Iyer saakshatv
ಜನವರಿಯಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಗಾಗಿಫ್ರಾಂಚೈಸಿಗಳು ತೀವ್ರ ಪೈಪೆÇೀಟಿ ಒಡ್ಡುವ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಅನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ 2020ರ ಐಪಿಎಲ್ ನಲ್ಲಿ ತಂಡವನ್ನ ಫೈನಲ್ ಗೇರಿಸಿದ್ದರು.
ಆದ್ರೆ 2021ರ ಐಪಿಎಲ್ ಆವೃತ್ತಿಯಲ್ಲಿ ಅಯ್ಯರ್ ಕ್ಯಾಪ್ಟನ್ಸಿ ಸ್ಥಾನವನ್ನು ಕಳೆದುಕೊಂಡಿದ್ದರು. ರಿಷಬ್ ಪಂತ್ ಡೆಲ್ಲಿ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಈ ಮಧ್ಯೆ ಮೆಗಾ ಹರಾಜನ್ನ ಗಮನದಲ್ಲಿಟ್ಟುಕೊಂಡು ಡೆಲ್ಲಿ ತಂಡ ಅಯ್ಯರ್ ಅವರನ್ನ ಕೈಬಿಟ್ಟಿದೆ.
ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ಪರ 2375 ರನ್ ಗಳಿಸಿರುವ ಅಯ್ಯರ್ ಗಾಗಿ ಐಪಿಎಲ್ ನ ಐದು ತಂಡಗಳು ಭಾರಿ ಪೈಪೋಟಿ ನಡೆಸುತ್ತಿವೆ ಎಂದು ವರದಿಯಾಗಿದೆ.
ಮೆಗಾ ಹರಾಜಿನಲ್ಲಿ ಅಯ್ಯರ್ ಗಾಗಿ ಅಹಮದಾಬಾದ್, ಲಕ್ನೋ, ಆರ್‍ಸಿಬಿ, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಗಿಬೀಳಲಿವೆ ಎಂದು ತಿಳಿದುಬಂದಿದೆ.
ಲಕ್ನೋ ತಂಡ ಕೆ.ಎಲ್.ರಾಹುಲ್ ಅವರನ್ನು ಈಗಾಗಲೇ ಬುಟ್ಟಿಯಲ್ಲಿ ಹಾಕಿಕೊಂಡಿದೆ. ಕೆ.ಎಲ್ ಗೆ ನಾಯಕತ್ವ ವಹಿಸಲಿರುವ ಲಕ್ನೋ, ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿಕೊಳ್ಳಲು ಅಯ್ಯರ್ ಮಣೆ ಹಾಕುವ ಸಾಧ್ಯತೆಗಳಿವೆ.
ಇತ್ತ ಅಹಮದಾಬಾದ್ ತಂಡಕ್ಕೆ ನಾಯಕನ ಅವಶ್ಯಕತೆ ಇದೆ. ಅದು ಕೂಡ ಟೀಂ ಇಂಡಿಯಾದ ಆಟಗಾರನಾಗಿದ್ದರೇ ತಂಡದ ಬ್ರ್ಯಾಂಡ್ ಕೂಡ ಹೆಚ್ಚುವ ಸಾಧ್ಯತೆಗಳಿವೆ. ಹೀಗಾಗಿ ಅಹಮದಾಬಾದ್ ತಂಡ ಅಯ್ಯರ್ ಗಾಗಿ ಪೈಪೋಟಿ ನಡೆಸಲಿದೆ.
ಇನ್ನು ಕಿಂಗ್ಸ್ ಪಂಜಾಬ್ ವಿಷಯಕ್ಕೆ ಬಂದರೆ, ಕೆಎಲ್ ರಾಹುಲ್ ಅವರನ್ನು ಪಂಜಾಬ್‍ನಿಂದ ಕೈಬಿಟ್ಟಿರುವುದರಿಂದ ತಂಡಕ್ಕೆ ಹೊಸ ನಾಯಕನ ಅವಶ್ಯಕತೆಯಿದೆ. ಅಯ್ಯರ್ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಪಂಜಾಬ್ ಖಂಡಿತವಾಗಿಯೂ ಅಯ್ಯರ್ ಅವರಿಗಾಗಿ ಟ್ರೈ ಮಾಡಲಿದೆ.
ಇನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದಾರೆ. ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿಕೊಳ್ಳಲು ಮುಂಬೈ ಕೂಡ ಅಯ್ಯರ್ ಮೇಲೆ ಕಣ್ಣಿಟ್ಟಿದೆ.
ಈ ಎಲ್ಲಾ ತಂಡಗಳಿಗಿಂತ ಹೆಚ್ಚಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಯ್ಯರ್ ಗೆ ಮಣೆ ಹಾಕುವ ಸಾಧ್ಯಗೆಗಳಿವೆ. ಕೊಹ್ಲಿ, ಮ್ಯಾಕ್ಸ್ ವೆಲ್ ಮತ್ತು ಸಿರಾಜ್ ಅವರನ್ನು ಮಾತ್ರ ಉಳಿಸಿಕೊಂಡಿರುವ ಆರ್ ಸಿಬಿ ಶ್ರೇಯಸ್ ಅಯ್ಯರ್ ಗಾಗಿ ಭಾರೀ ಖರ್ಚು ಮಾಡಲಿದೆ ಎಂದು ತಿಳಿದುಬಂದಿದೆ.