ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಯಾವ ದಾಖಲೆಗಳನ್ನು ಅಗತ್ಯ ಕೆಲಸಗಳಿಗೆ ಬಳಸಬಹುದು
ಆಧಾರ್ ಕಾರ್ಡ್ ಇಂದು ಎಲ್ಲಾ ವಯಸ್ಸಿನ ಜನರಿಗೆ ಅತ್ಯಗತ್ಯವಾದ ದಾಖಲೆಯಾಗಿದೆ. ಯಾವುದೇ ಪ್ರಮುಖ ಸರ್ಕಾರಿ ಅಥವಾ ಖಾಸಗಿ ಕೆಲಸಗಳನ್ನು ಆಧಾರ್ ಇಲ್ಲದೆ ಮಾಡುವುದು ತುಂಬಾ ಕಷ್ಟ. ಈ ಕಾರಣದಿಂದಲೇ ಜನರು ಈಗ ಆಧಾರ್ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಆಧಾರ್‌ನಲ್ಲಿ ಎಲ್ಲಾ ಮಾಹಿತಿಯನ್ನು ಹೊಂದಿರುವುದು ಸಹ ಮುಖ್ಯ . UIDAI ಟ್ವೀಟ್ ಮಾಡಿದ್ದು, ಈಗ ಜನರು ಆಧಾರ್ ಕಾರ್ಡ್ ಇಲ್ಲದಿದ್ದರೂ ಈ ಆಯ್ಕೆಗಳನ್ನು ಬಳಸಿಕೊಂಡು ತಮ್ಮ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬಹುದು.
ನೀವು ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಈ ದಾಖಲೆಗಳನ್ನು ಬಳಸಬಹುದು.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಪತ್ರ, ಇ-ಆಧಾರ್, ಎಂಆಧಾರ್ ಮತ್ತು ಆಧಾರ್ ಪಿವಿಸಿ ಕಾರ್ಡ್ ಸಮಾನವಾಗಿ ಮಾನ್ಯ ಮತ್ತು ಸ್ವೀಕಾರಾರ್ಹ ಎಂದು ಹೇಳಿದೆ.
ಆಧಾರ್ ಪತ್ರ, ಇ-ಆಧಾರ್, ಎಂಆಧಾರ್‌ಗೆ ಸಂಬಂಧಿಸಿದ ಪ್ರಮುಖ ವಿಷಯ
>> ಆಧಾರ್ ಕಾರ್ಡ ಅಥವಾ ಯಾವುದೇ ಸಾಮಾನ್ಯ ಪೇಪರ್‌ನಲ್ಲಿ ಆಧಾರ್‌ನ ಡೌನ್‌ಲೋಡ್ ಮಾಡಿದ ಆವೃತ್ತಿಯು ಬಳಕೆದಾರರಿಗೆ ಸಂಪೂರ್ಣವಾಗಿ ಮಾನ್ಯವಾಗಿರುತ್ತದೆ. ಒಬ್ಬ ವ್ಯಕ್ತಿಯು ಪೇಪರ್ ಆಧಾರ್ ಕಾರ್ಡ್ ಹೊಂದಿದ್ದರೆ ಆತನ ಆಧಾರ್ ಕಾರ್ಡ್ ಲ್ಯಾಮಿನೇಟ್ ಮಾಡುವ ಅಗತ್ಯವಿಲ್ಲ.
>> ಒಬ್ಬ ವ್ಯಕ್ತಿಯ ಆಧಾರ್ ಕಾರ್ಡ್ ಕಳೆದುಹೋದರೆ, ಆತ ತನ್ನ ಆಧಾರ್ ಕಾರ್ಡ್ ಅನ್ನು https://eaadhaar.uidai.gov.in ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಇದನ್ನು ಪ್ಲಾಸ್ಟಿಕ್/ಪಿವಿಸಿ ಮೇಲೆ ಮುದ್ರಿಸುವ ಅಗತ್ಯವಿಲ್ಲ.
>> mAadhaar ಆಪ್ ಆಧಾರ್ ನ ಅಧಿಕೃತ ಅಪ್ಲಿಕೇಶನ್ ಆಗಿದೆ. ಈ ಆಪ್‌ನಲ್ಲಿ, ನೀವು ನಿಮ್ಮ ಆಧಾರ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. ನಿಮ್ಮ ಬಳಿ ಆಧಾರ್‌ಕಾರ್ಡ್ ಇಲ್ಲದಿದ್ದರೆ, ನೀವು mAadhaar ಬಳಸಿ ನಿಮ್ಮ ಕೆಲಸವನ್ನೂ ಮಾಡಬಹುದು. ಈ ಅಪ್ಲಿಕೇಶನ್ ನಿಮಗೆ ಆಧಾರ್‌ಗೆ ಲಿಂಕ್ ಮಾಡಿದ 35 ಕ್ಕೂ ಹೆಚ್ಚು ಆಧಾರ್ ಸೇವೆಗಳನ್ನು ಒದಗಿಸುತ್ತದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಹೆಸರು ಹಿಟ್ಟಿನ ಲಾಡು#Saakshatv #cookingrecipe https://t.co/m8zrY89gyn
— Saaksha TV (@SaakshaTv) August 1, 2021
ಅರಿಶಿನ ಎಣ್ಣೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳು#Saakshatv #healthtips #turmeric #oil https://t.co/SjewS9wI9u
— Saaksha TV (@SaakshaTv) August 1, 2021
ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಸುಲಭ ವಿಧಾನ#Saakshatvhealth #thyroidproblem https://t.co/6SmYRUSeqt
— Saaksha TV (@SaakshaTv) July 31, 2021
ಮನೆಯಲ್ಲೇ ಕೊರೋನಾ ಸೋಂಕಿನ ತಪಾಸಣೆಗಾಗಿ ಹೋಮ್ ಟೆಸ್ಟ್ ಕಿಟ್#homekits https://t.co/TiAKhu3KCy
— Saaksha TV (@SaakshaTv) July 31, 2021
#Aadharcard