ರಾಜ್ಯದಲ್ಲಿ ಇದೀಗ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಸಮಗ್ರ ಸಮೀಕ್ಷೆ ಪ್ರಾರಂಭವಾಗಿದೆ. ಈ ಸಮೀಕ್ಷೆಯು ಸಮಾಜದ ಹಿನ್ನೋಟ ಮತ್ತು ಅಭಿವೃದ್ಧಿಯ ಉದ್ದೇಶದಿಂದ ಪ್ರಾರಂಭಗೊಂಡಿದ್ದು, ಗಣತಿದಾರರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಅವರು ಆಗಮಿಸಿದಾಗ, ಸಮೀಕ್ಷೆಗೆ ಒಳಪಡುವ ಕುಟುಂಬಗಳು ತಮ್ಮ ಮೂಲ ಜಾತಿ, ಶಿಕ್ಷಣದ ಮಟ್ಟ, ಕುಟುಂಬದ ವಾರ್ಷಿಕ ಆದಾಯ, ಉದ್ಯೋಗದ ವಿವರಗಳು, ಆಸ್ತಿ ಮಾಹಿತಿ, ಬದುಕುಳಿವಿನ ಪರಿಸ್ಥಿತಿಗಳು ಸೇರಿದಂತೆ ಹಲವು ಪ್ರಮುಖ ಮಾಹಿತಿಗಳನ್ನು ಸ್ಪಷ್ಟವಾಗಿ ಹಾಗೂ ಸತ್ಯವಾಗಿ ನೀಡಬೇಕು ಎಂದು ಸರ್ಕಾರ ಮನವಿ ಮಾಡಿದೆ.
ಈ ಸಮೀಕ್ಷೆಯ ಮೂಲಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರ ನೈಜ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಮುಂದಾಗಿದೆ. ಇದು ಮುಂದಿನ ದಿನಗಳಲ್ಲಿ ಸಮುದಾಯಗಳಿಗೆ ತಲುಪಬೇಕಾದ ಸೌಲಭ್ಯಗಳು, ಕಲ್ಪನೆಗೊಳ್ಳಬೇಕಾದ ಯೋಜನೆಗಳು ಮತ್ತು ಮೀಸಲಾತಿಯ ಆಧಾರದ ಮೇಲೆ ನಿಖರವಾದ ನೀತಿ ರೂಪಿಸೋಕೆ ನೆರವಾಗಲಿದೆ. ಈ ಹಿನ್ನಲೆಯಲ್ಲಿ, ಯಾವುದೇ ಮಾಹಿತಿ ನೀಡದಿದ್ದರೆ ಅಥವಾ ತಪ್ಪು ಮಾಹಿತಿ ನೀಡಿದರೆ, ಅದು ಸಮೀಕ್ಷೆಯ ಉದ್ದೇಶವನ್ನು ಹಾಳುಮಾಡ್ಬಹುದು.








