ಕೇರಳ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ….
ರಾಹುಲ್ ಗಾಂಧಿ ನೇತೃತ್ವದಲ್ಲಿ ತಮಿಳು ನಾಡು ಪ್ರವಾಸದ ನಂತರ ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ ತನ್ನ 19 ದಿನಗಳ ಸುದೀರ್ಘ ಯಾತ್ರೆಗಾಗಿ ದೇವರನಾಡು ಕೇರಳವನ್ನ ಪ್ರವೇಶಿಸಿದೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಮತ್ತು ಸಂಸದ ಕೆ ಸುಧಾಕರನ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಔಪಚಾರಿಕವಾಗಿ ಸ್ವಾಗತಿಸಿದ ನಂತರ ರಾಹುಲ್ ಗಾಂಧಿ ಅವರು ಯಾತ್ರೆಯನ್ನು ಪ್ರಾರಂಭಿಸಿದರು.
ರಾಹುಲ್ ಗಾಂಧಿ ವಂಶಸ್ಥರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಬೆಂಬಲಿಗರು ಮತ್ತು ವೀಕ್ಷಕರು ಜಮಾಯಿಸಿದರು. ಕಾಂಗ್ರೆಸ್ ಸಂಸದರಾದ ಕೆ ಸಿ ವೇಣುಗೋಪಾಲ್ ಮತ್ತು ಶಶಿ ತರೂರ್ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಮಾಜಿ ಲೋಪಿ ರಮೇಶ್ ಚೆನ್ನಿತಲಾ ಕೂಡ ರಾಹುಲ್ ಗಾಂಧಿ ಅವರನ್ನ ಸ್ವಾಗತಿಸಲು ಆಗಮಿಸಿದ್ದರು.
“ಕೇರಳದಲ್ಲಿ ನಮ್ಮ ಭಾರತ್ ಜೋಡೋ ಯಾತ್ರೆ. ಭಾರತದ ವೈವಿಧ್ಯತೆ ತುಂಬಾ ಸ್ಪಷ್ಟವಾಗಿದೆ. ನಿನ್ನೆ ನಾವು ತಮಿಳು ಮಾತನಾಡುವ ತಮಿಳುನಾಡಿನಿಂದ ಮಲಯಾಳಂ ಮಾತನಾಡುವ ಕೇರಳವನ್ನು ಪ್ರವೇಶಿಸಿದ್ದೇವೆ. “ವನ್ನಾಕಂ” ನಿಂದ “ನಮಸ್ಕಾರಂ” ವರೆಗೆ. ಎಂದು ಕಾಂಗ್ರೇಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಟ್ವಿಟ್ ಮಾಡಿದ್ದಾರೆ.
ತಮಿಳುನಾಡು ಗಡಿಯ ಸಮೀಪವಿರುವ ಪಾರಸಾಲದಿಂದ ಕೇರಳವನ್ನು ಪ್ರವೇಶಿಸಿದ ನಂತರ, ಗಾಂಧಿಯವರು 19 ದಿನಗಳ ಅವಧಿಯಲ್ಲಿ ಮಲಪ್ಪುರಂನ ನಿಲಂಬೂರ್‌ಗೆ 450 ಕಿ.ಮೀ ಯಾತ್ರೆ ನಡೆಸಲಿದ್ದಾರೆ. 22 ಪ್ರಮುಖ ನಗರಗಳಲ್ಲಿ ಮೆಗಾ ರ್ಯಾಲಿಗಳು ನಡೆಯಲಿವೆ.