INC TV – ಸ್ವಂತ ಚಾನಲ್ ಶುರು ಮಾಡಿದ ಕಾಂಗ್ರೆಸ್..!
ನವದೆಹಲಿ : ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತನ್ನ ಸ್ವಂತ ರಾಷ್ಟ್ರೀಯ ಚಾನಲ್ ಆರಂಭಿಸಿದೆ. ಯೂಟ್ಯೂಬ್ ನಲ್ಲಿ ಕಾಂಗ್ರೆಸ್ ಇದೇ ತಿಂಗಳ 24ರಿಂದ ‘INC TV ‘ ಎಂಬ ಹೆಸರಿನ ಹೊಸ ಚಾನೆಲ್ ಆರಂಭಿಸಲಿದೆ. ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಜತೆಗೆ ಡಿಜಿಟಲ್ ಪ್ಲಾಟ್ ಫಾರಂಗಳಲ್ಲಿ ಚಾನೆಲ್ ಯಾವ ರೀತಿ ಇರಲಿದೆ ಎಂಬ ಬಗ್ಗೆ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಮತ್ತು ದುರ್ಬಲರ ಧ್ವನಿಯಾಗಿ ಚಾನೆಲ್ ಕಾರ್ಯ ನಿರ್ವಹಿಸಲಿದೆ ಎಂದಿದ್ದಾರೆ. ವೃತ್ತಿಪರ ಪತ್ರಕರ್ತರೊಬ್ಬರು ಅದರ ನೇತೃತ್ವ ವಹಿಸಲಿದ್ದಾರೆ. ಚಾನೆಲ್ 8 ಗಂಟೆ ಕಾಲ ನೇರಪ್ರಸಾರ ಕಾರ್ಯಕ್ರಮ ನೀಡಲಿದೆ.
‘ಮಹಾನಾಯಕ’ ಧಾರಾವಾಹಿಯ ಫ್ಲೆಕ್ಸ್ ಗೆ ಬೆಂಕಿಯಿಟ್ಟ ಕಿಡಗೇಡಿಗಳು..!








