ಕಾಂಗ್ರೆಸ್ ಮೇಲಿನ ಮುನಿಸಿಗೆ ಕಾರಣ ಬಿಚ್ಚಿಟ್ಟ ಸಿ.ಎಂ ಇಬ್ರಾಹಿಂ
ಮೈಸೂರು : ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮುನಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇನ್ನೇನು ಕೆಲವೇ ದಿನಗಳಲ್ಲಿ ಸಿಎಂ ಇಬ್ರಾಹಿಂ ಪಕ್ಷ ತೊರೆಯಲಿದ್ದಾರೆ ಅನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಇಬ್ರಾಹಿಂ ಬಹಿರಂಗವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಆದ್ರೀಗ ಪಕ್ಷದ ಮೇಲೆ ತಮ್ಮ ಮುನಿಸಿಗೆ ಕಾರಣವೇನು ಎಂದು ಇಬ್ರಾಹಿಂ ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ದಲಿತರ ಸಮಸ್ಯೆಯನ್ನ ದಲಿತರು, ಲಿಂಗಾಯ್ತರ ಸಮಸ್ಯೆಯನ್ನ ಲಿಂಗಾಯ್ತರೆ ಪರಿಹಾರ ಮಾಡ್ತಾರೆ. ಮುಸ್ಲಿಮರ ಸಮಸ್ಯೆಯನ್ನ ಮುಸ್ಲಿಮರೇ ಯಾಕೆ ಪರಿಹಾರ ಮಾಡಬಾರದು..? ಈ ಮೂಲಭೂತ ಪ್ರಶ್ನೆಯೇ ನನ್ನದು ಎಂದು ಅವರು ಹೇಳಿದ್ದಾರೆ.
ಮುಸ್ಲಿಮರಲ್ಲಿ ಮುಂದೆ ಯಾರು ಎಂ.ಎಲ್.ಎ ಆಗಬೇಕು ಎನ್ನುವುದನ್ನ ಸಮಾಜದ ಜನ ನಾವ್ ತೀರ್ಮಾನ ಮಾಡುತ್ತೇವೆ. ಚೇರ್ಮನ್ ಯಾರಗಬೇಕು ಎಂದು ನಾವು ತೀರ್ಮಾನ ಮಾಡುತ್ತೇವೆ. ಬೇರೆಯವರು ತೀರ್ಮಾನ ಮಾಡುವುದಲ್ಲ. ಹಿಂದುಳಿದ ವರ್ಗದವರಲ್ಲಿ ಯಾರ್ ಲೀಡರ್ ಆಗ್ಬೇಕು ಎಂದು ನಾವು ತೀರ್ಮಾನ ಮಾಡಿದ್ವಾ..? ದಲಿತರ ಆಯ್ಕೆ ಮಾಡುವುದರ ಬಗ್ಗೆ ದಲಿತ ನಾಯಕರು ತೀರ್ಮಾನ ಮಾಡುತ್ತಾರೆ. ಮುಸ್ಲಿಮರ ನಾಯಕ ಯಾರಗಬೇಕು ಎನ್ನೋದನ್ನ ನೀವುಗಳೇ ತೀರ್ಮಾನ ಮಾಡಿದರೆ ನಾವೆಲ್ಲ ಏನೂ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಇನ್ನು ಅಧಿಕಾರ ಸಿಗದಿರುವವರೆಗೂ ನಾವ್ ಎಲ್ಲಿಗೂ ಬರೋದಿಲ್ಲ ಎಂದು ನಾನು ಯಾವುದೇ ಚುನಾವಣೆಗೆ ಹೋಗಲಿಲ್ಲ. ಯಾವ ಉಪಚುನಾವಣೆಗೂ ಹೋಗೋದಿಲ್ಲ ಎಂದಿದ್ದೇನೆ. ಮುಂದೇನು ಯಾವುದೇ ಚುನಾವಣೆಗೂ ಹೋಗೋದಿಲ್ಲ ಎಂದು ಹೇಳಿದ್ದೇನೆ. ಬೆಳಗಾವಿ, ಬಸವ ಕಲ್ಯಾಣ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದೆ. ಮುಸ್ಲಿಮರು 70% ವೋಟ್ ಸಿಗಲಿಲ್ಲ. ಹುಮ್ಮಸ್ಸು ಸಿಗದಿದ್ದರಿಂದ ಚುನಾವಣೆಯಲ್ಲಿ ಪಾಲ್ಗೊಳ್ಳಲಿಲ್ಲ. ಅಲ್ಪ ಸಂಖ್ಯಾತರ ವೋಟು ಮಾತ್ರ ಬೇಕು ಎನ್ನೋದು ತಪ್ಪು. ನನ್ನ ಕೋಪ ವಿಷಯಧರಿತ ಕೋಪ, ವ್ಯಕ್ತಿಯಾಧಾರಿತ ಕೋಪ ಅಲ್ಲ. ಸಿದ್ದರಾಮಯ್ಯ ಎಲ್ಲನು ಸರಿ ಮಾಡ್ತೇನೆ ಎಂದಿದ್ದಾರೆ, ನಾನು ಇಲ್ಲ ದೆಹಲಿಗೆ ಹೋಗಬೇಕು ಎಂದಿದ್ದೇನೆ. ಮೇಡಂ ಅವರು ತೀರ್ಮಾನ ಮಾಡಬೇಕು ಅದಕ್ಕೆ ದೆಹಲಿಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.









