Congress : ಐಕ್ಯತಾ ಸಮಾವೇಶ ಚುನಾವಣೆಗೆ ಮೈಲಿಗಲ್ಲು – ಚಲುವರಾಯಸ್ವಾಮಿ
ಮಂಡ್ಯ : ಎಸ್ಸಿ, ಎಸ್ಟಿ, ಐಕ್ಯತಾ ಸಮಾವೇಶ ಚುನಾವಣೆಗೆ ಮೈಲಿಗಲ್ಲು ಆಗಲಿದೆ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ..
ಚಿತ್ರದುರ್ಗ ದಲ್ಲಿ ನಡೆಯುವ ಎಸ್ಸಿ, ಎಸ್ಟಿ,ಐಕ್ಯತಾ ಸಮಾವೇಶದ ಬಗ್ಗೆ ಮಾತನಾಡುತ್ತಾ ಜನವರಿ 08 ರಂದು ನಡೆಯುವ ಐಕ್ಯಾತಾ ಸಮಾವೇಶ ಇದೆ. ಮಂಡ್ಯ ಜಿಲ್ಲೆಯಿಂದ ಕಾಂಗ್ರೇಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಇನ್ನೂ ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಇಂತಹ ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.
ರಾಹುಲ್ ಗಾಂಧೀಯವರ ಭಾರತ್ ಜೋಡೋ ಯಾತ್ರೆ ಕೆಲವೇ ದಿನದಲ್ಲಿ ಇತಿಹಾಸದ ಪುಟ ಸೇರಲಿದೆ.
ಐಕ್ಯತಾ ಸಮಾವೇಶ ಕೂಡ ಐತಿಹಾಸಿಕವಾಗಲಿದೆ ಚುನಾವಣೆಗೆ ಮೈಲಿಗಲ್ಲು ಆಗಲಿದೆ.
ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ತೆರಳಲಿದ್ದಾರೆ.
ಸುಮಾರು 150 ಬಸ್ ಗಳಲ್ಲಿ ತೆರಳಿ ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ ಎಂದಿದ್ದಾರೆ.







