ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಬಲವರ್ಧನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಬಿಟ್ಟು ಹೊರಗುಳಿದವರು, ಪಕ್ಷಾಂತರ ಮಾಡಿದವರನ್ನು ಮರಳಿ ಗೂಡಿಗೆ ಕರೆತರುವ ಟ್ರಬಲ್ ಶೂಟರ್ ಡಿಕೆಶಿ ಸಮಿತಿಯೊಂದನ್ನು ರಚಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷ ಬಿಟ್ಟು ಹೋದವರು, ಪಕ್ಷಕ್ಕೆ ಸೇರ ಬಯಸಿದವರನ್ನು ಸಂಪರ್ಕಿಸಿ, ಅವರ ಅಭಿಪ್ರಾಯಗಳನ್ನು ಪಡೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು, ಆ ಬಗ್ಗೆ ಕೆಪಿಸಿಸಿಗೆ ವರದಿಯನ್ನು ನೀಡಲು ಸಮಿತಿಯನ್ನು ರಚಿಸಲಾಗಿದೆ. ಸದರಿ ಸಮಿತಿಯು ಸಮಿತಿಯು ಈ ಕೆಳಗಿನಂತಿದೆ.
ಅಧ್ಯಕ್ಷರು – ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವರು. ಸಂಚಾಲಕರು – ಬಿಎ ಹಸನಬ್ಬ, ಮಾಜಿ ಶಾಸಕರು. ಸದಸ್ಯರಾಗಿ ಶಾಸಕರಾದ ವಿ ಮುನಿಯಪ್ಪ, ಮಾಜಿ ಶಾಸಕರಾದ ಅಜಯ್ ಕುಮಾರ್ ಸರ್ ನಾಯಕ್, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಮಾಜಿ ಸಂಸದರಾದ ಆರ್ ಧ್ರುವ ನಾರಾಯಣ, ಬಿ ಎನ್ ಚಂದ್ರಪ್ಪ, ವಿ ವೈ ಘೋರ್ಪಡೆ, ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಶಾಸಕರಾದ ಸತೀಶ್ ಶೈಲ್, ಮಾಜಿ ಅಧ್ಯಕ್ಷರಾದ ಕೃಪಾ ಆಳ್ವ, ಮಾಜಿ ಶಾಸಕಿಯಾದ ಪ್ರಫುಲ್ಲಾ ಮಧುಕರ್.








