Congress | ಡಿಕೆಶಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಶಿವಮೊಗ್ಗದಲ್ಲಿ ಕೈ ಪ್ರೊಟೆಸ್ಟ್
ಶಿವಮೊಗ್ಗ : ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಕಚೇರಿಯಿಂದ ಮಹಾವೃತ್ತದವರೆಗೆ ಸಾಗಿದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಈಶ್ವರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದರು.
ಡಿ.ಕೆ.ಶಿವಕುಮಾರ್ ವಿರುದ್ಧ ಅವರು ಮಾತನಾಡಿರುವುದಕ್ಕೆ ತಕ್ಷಣ ಕ್ಷಮೆ ಕೋರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈಶ್ವರಪ್ಪರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಮಹಾವೀರ ವೃತ್ತದಲ್ಲಿ ಈಶ್ವರಪ್ಪ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್.ಎಂ. ಸುಂದರೇಶ್ , ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ, ಜನಪ್ರತಿನಿಧಿಗಳು ಮಂತ್ರಿಗಳು ಮಾತನಾಡುವ ರೀತಿ ನಾಚಿಗೆಗೇಡಿನಿಂದ ಕೂಡಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ರಾಜಕಾರಣಿಗೆ ಸಂಸ್ಕೃತಿ ಬಹಳ ಮುಖ್ಯ. ಇವರು ಓಟಿಗೋಸ್ಕರ ಹುಚ್ಚುಚ್ಚು ರೀತಿಯಲ್ಲಿ ಮಾತನಾಡಿದರೆ, ಅದರಿಂದ ಏನೋ ಲಾಭವಾಗುತ್ತೆ ಎಂದು ತಿಳಿದುಕೊಂಡು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಸಿಟಿ ರವಿಯವರು ಕೂಡ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ರು. ಈಶ್ವರಪ್ಪ ಪದೇ ಪದೇ ಕಾಂಗ್ರೇಸ್ ನಾಯಕರ ಬಗ್ಗೆ ಅವಾಚ್ಯವಾಗಿ ಮಾತನಾಡುತ್ತಿದ್ದಾರೆ.
ಇವರ ಪಕ್ಷದಲ್ಲೇ ಶೇಕಡಾ 40 ಪರ್ಸೆಂಟ್ ಕಳ್ಳರು ಮುಕ್ಕಾಲು ಭಾಗ ಇದ್ದಾರೆ. ನಾಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ದ್ವೇಷದ ರಾಜಕಾರಣ ಮಾಡಿದ್ರೆ .ಇವರಲ್ಲಿ ಮುಕ್ಕಾಲು ಭಾಗ ಜೈಲಿನಲ್ಲಿರುತ್ತಾರೆ ಎಂದು ಎಚ್ಚರಿಸಿದ್ದಾರೆ.