ಕಾಂಗ್ರೆಸ್ ಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ : ಅಶೋಕ್
ಬೆಂಗಳೂರು : ವಿಧಾನ ಪರಿಷತ್ ನಲ್ಲಿ ತಳ್ಳಾಟ ನೂಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಭಾಪತಿ ಅವರ ವಿರುದ್ಧ ಅವಿಶ್ವಾಸ ಪ್ರಸ್ತಾಪ ಮಾಡಲಾಗಿದೆ.
ಪರಿಷತ್ ಸಭಾಪತಿ ಫೈಟ್: ಧರ್ಮೇಗೌಡರನ್ನು ಎಳೆದಾಡಿದ ಕಾಂಗ್ರೆಸ್, ಗದ್ದಲ, ಕೋಲಾಹಲ, ಮತ್ತೆ ಮುಂದೂಡಿಕೆ..!?
ಸೂಚನೆ ನೀಡಿದ ನಂತರ ಅದರ ಮೇಲೆ ಮತದಾನ ನಡೆಯಬೇಕಿರುವುದು ಪ್ರಜಾಪ್ರಭುತ್ವ. ಆದರೆ ಕಲಾಪಕ್ಕೆ ಅವಕಾಶ ನೀಡದೆ ಅಡ್ಡಿ ಪಡಿಸಲಾಗಿದೆ.
ಹಿಂದೆ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದ ಕಾಂಗ್ರೆಸ್ ಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಮತದಾನಕ್ಕೆ ಅವಕಾಶ ನೀಡದೆ ಫಲಾಯವಾದ ಅನುಸರಿಸಿದೆ ಎಂದು ಕಿಡಿಕಾರಿದರು.
ಇನ್ನು ಇಂದು ನಡೆದ ಘಟನೆ ಒಳ್ಳೆಯ ಬೆಳವಣಿಗೆ ಅಲ್ಲ. ಇದು ಖಂಡನೀಯ. ಇಂದಿನ ಬೆಳವಣಿಗೆ ವಿಧಾನ ಪರಿಷತ್ ನ ಇತಿಹಾಸಕ್ಕೆ ಕಳಂಕ ತಂದಿದೆ.
ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅಶೋಕ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









