ಚಾಮರಾಜನಗರ ; ರಾಜ್ಯ ರಾಜಕೀಯದಲ್ಲಿ ಬಿಜೆಪಿ ರೆಬೆಲ್ಸ್ ಟೀಂ ಡಿನ್ನರ್ ಪಾರ್ಟಿ ಕೋಲಾಹಲ ಸೃಷ್ಠಿಯಾಗಿದೆ. 20ಕ್ಕೂ ಹೆಚ್ಚು ಶಾಸಕರು ಉಮೇಶ್ ಕತ್ತಿ ಆಯೋಜಿಸಿದ್ದ ಔತಣಕೂಟಕ್ಕೆ ಭಾಗಿಯಾಗಿದ್ದರು. ಸಭೆಯ ಬಳಿಕ ಸರ್ಕಾರದ ವಿರುದ್ದ ಕೆಲ ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಈ ನಡುವೆ ಸಚಿವ ರಮೇಶ್ ಜಾರಕಿಹೊಳಿ ಹೊಸದೊಂದು ಬಾಂಬ್ ಸಿಡಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಬಿಜೆಪಿ ಹೈಕಮಾಂಡ್ ಅನುಮತಿ ಕೊಟ್ರೆ, ಕಾಂಗ್ರೆಸ್ ನ ಇನ್ನೂ 5 ಜನ ಶಾಸಕರ ರಾಜಿನಾಮೆ ಕೊಡಿಸಿ ಬಿಜೆಪಿಗೆ ಕರೆತರುತ್ತೇನೆ ಎಂದು ಹೇಳಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಪ್ರಮುಖ ಕಾರಣವಾಗಿರುವ ರಮೇಶ್ ಜಾರಕಿಹೊಳಿ ಕೇಳಿದ ನಂತರದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಆತಂಕ ಹೆಚ್ಚಾಗಿದೆ.
ಕಳೆದ ಎರಡು ದಿನಗಳಿಂದ ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿರುವ ಜಲ ಸಂಪನ್ಮೂಲ ಸಚಿವ ಜಾರಕಿ ಹೊಳಿ ಇಂದು ಚಾಮರಾಜನಗರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಿದರು. ಇದಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸದ ಅವರು, ಕೇವಲ ಒಂದು ವಾರದೊಳಗೆ ಐದು ಜನ ಶಾಸಕ ರಾಜಿನಾಮೆ ಕೊಡಿಸಬಲ್ಲೆ. ಈಗಲೂ ನನ್ನ ಬಳಿ 22 ಜನ ಶಾಸಕರು ನನ್ನ ಕಂಟ್ರೋಲ್ ನಲ್ಲಿದ್ದಾರೆ. ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು ಅಲ್ಲಿಗೆ ಈಗ ಹೋಗುವವರು ಮೂರ್ಖರು. ಇನ್ನು ಮುಂದೆ ನನ್ನ ರಾಜಕೀಯ ಅಂತ್ಯ ಬಿಜೆಪಿಯಲ್ಲೇ ಹೊರತು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದು ಹೇಳಿದ್ದಾರೆ.








