Congress | ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬುಲಾವ್
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬುಲಾವ್ ಕೊಟ್ಟಿದೆ.
ಕಾಂಗ್ರೆಸ್ ದೆಹಲಿ ವರಿಷ್ಠರು ಆಯ್ದ 15 ನಾಯಕರಿಗೆ ಬುಲಾವ್ ನೀಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ 24 ನೇ ತಾರೀಖು ದೆಹಲಿಗೆ ತೆರಳಲಿದ್ದಾರೆ.
24 ನೇ ತಾರೀಖು 3.30 ಕ್ಕೆ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಯುಟಿ ಖಾದರ್, ಪರಮೇಶ್ವರ್ ಸೇರಿದಂತೆ ಐದು ಜನ ಕಾರ್ಯಾಧ್ಯಕ್ಷರು,ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ಎಚ್ ಕೆ ಪಾಟೀಲ್, ಬಿ.ಕೆ ಹರಿಪ್ರಸಾದ್,ಕೆ ಹೆಚ್ ಮುನಿಯಪ್ಪ ಭಾಗವಹಿಸಲಿದ್ದಾರೆ.
ಸದ್ಯ ರಾಜ್ಯದಲ್ಲಿ ಹಿಜಾಬ್, ಮೇಕೆದಾಟು, ಸೇರಿದಂತೆ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪಕ್ಷ ಯಾವ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.









