ಕಾಂಗ್ರೇಸ್ ಪಾದಯಾತ್ರೆ: ಮೇಕೆದಾಟು ಯೋಜನೆ ಅನುಷ್ಠಾನ
ಮೈಸೂರು: ರಾಜ್ಯದ ಹಿತಕ್ಕಾಗಿ ನಾವು ಈ ಮೇಕೆದಾಟು ಹೋರಾಟ ಮಾಡುತ್ತಿದ್ದೇವೆ. ಕುಡಿಯುವ ನೀರನ್ನು ಜನರಿಗೆ ಕೊಡಬೇಕು ಅನ್ನೋದು ನಮ್ಮ ಹೋರಾಟದ ಉದ್ದೇಶ. ಹಿಂದಿನಿಂದ ದೇವಿಯ ಶಕ್ತಿಯನ್ನ ನಾನು ನಂಬಿಕೊಂಡಿದ್ದೇನೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಸುಭಿಕ್ಷವಾಗಲಿ ಎಂದು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದ ಡಿಕೆಶಿ ಎಲ್ಲಾ ಅಡಚಣೆ ಸಂಹಾರ ಮಾಡುವ ಶಕ್ತಿ ದೇವಿಗೆ ಇದೆ. ಅದಕ್ಕಾಗಿ ನಾವು ಹೋರಾಟಕ್ಕು ಮುನ್ನ ದೇವರ ದರ್ಶನ ಮಾಡಿದ್ದೇವೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.
ಬಿಜೆಪಿ ನಾಯಕರ ಟೀಕೆಗೆ ವ್ಯಂಗ್ಯವಾಡಿದ ಡಿಕೆಶಿ, ಮಿನಿಸ್ಟರ್ ಗಳು ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕು ಹಿತವಾಗಲಿ. ಅವರು ಈಗ ಗಿಮಿಕ್ ಅಂತಿದ್ದಾರೆ. ವಾಜಪೇಯಿ ಕಾಲದಲ್ಲಿ ಅಡ್ವಾಣಿಯವರು ರಥಯಾತ್ರೆ ಮಾಡಿದ್ರು. ದೇವೆಗೌಡ್ರು ಹಿಂದೆ ಬೇಕಾದಷ್ಟು ಯಾತ್ರೆಗಳನ್ನು ಮಾಡಿದ್ದರು ಅದಕ್ಕೆ ಏನಂತ ಹೇಳಬೇಕು? ಎಂದು ಗುಡುಗಿದರು.
ಕುಮಾರಸ್ವಾಮಿಯವರು ಯಾತ್ರೆ ಮಾಡುತ್ತಿದ್ದಾರೆ.ಯಡಿಯೂರಪ್ಪನವರು ಐದು ತಂಡ ಮಾಡಿಕೊಂಡು ಮುಂದಿನ ಚುನಾವಣೆಗೆ ಯಾತ್ರೆ ಮಾಡತಿದ್ದಾರೆ.ಮೊದಲಿನಿಂದಲು ಒಂದು ಘಳಿಗೆನೂ ವ್ಯರ್ಥ ಮಾಡದೇ ಕೆಲಸ ಮಾಡ್ತಿದ್ದೇನೆ. ಬಿಜೆಪಿ ಸರ್ಕಾರ ಎಮ್ಮೆ ಚರ್ಮದ ಸರ್ಕಾರ, ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಜನ ಈ ಸರ್ಕಾರದ ಕಾರ್ಯವೈಖರಿಯನ್ನ ಗಮನದಲ್ಲಿಟ್ಟುಕೊಂಡಿದ್ದಾರೆ. ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.









